ಕ್ರಿಪ್ಟೋ ಕರೆನ್ಸಿ ನಿಷೇಧ ಕಷ್ಟಸಾಧ್ಯ: ಆದರೆ ನಿಯಂತ್ರಣಕ್ಕೆ ಹೊಸ ನಿಯಮಾವಳಿ ಬೇಕು: ಕೇಂದ್ರದ ಸಂಸದೀಯ ಸಮಿತಿ

ನವದೆಹಲಿ: ಪ್ಟೋ ಕರೆನ್ಸಿ ಕುರಿತಾದ ವಿಷಯವನ್ನು ಕೇಂದ್ರದ ಸಂಸದೀಯ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಕ್ರಿಪ್ಟೋ ಕರೆನ್ಸಿ ನಿಷೇಧ ಬೇಡ. ಬದಲಿಗೆ ನಿಯಂತ್ರಣಕ್ಕೆ ಹೊಸ ನಿಯಮಾವಳಿ ರೂಪಿಸಬೇಕು ಎಂದು ಅದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ದೇಶದಲ್ಲಿ ಕ್ರಿಪ್ಟೋಕರೆನ್ಸಿಯನ್ನು ನಿಲ್ಲಿಸುವುದು ಕಷ್ಟಸಾಧ್ಯ ಎಂಬುದು ಈಗ ಗೊತ್ತಾಗಿದೆ. ಆದರೆ ನಿಯಂತ್ರಣ ಅವಶ್ಯ ಎಂದು ಸಂಸದರು ಸೋಮವಾರ ಸಂಸತ್ ಸಮಿತಿ ಸಭೆಯಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪೂರ್ಣ ಪುಟದ ಕ್ರಿಪ್ಟೋ ಜಾಹೀರಾತುಗಳನ್ನು ನೀಡುತ್ತಿವಾಗ, ಹೂಡಿಕೆದಾರರ ಹಣದ ಭದ್ರತೆಯು ಎಲ್ಲ ಸದಸ್ಯರಿಗೆ ಅತ್ಯಂತ ಗಂಭೀರವಾದ ಕಾಳಜಿ ವಿಷಯವಾಗಿದೆ ಎಂದು ಸಂಸದರು ಹೇಳಿದ್ದಾರೆ. ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕ್ರಿಪ್ಟೋ ಫೈನಾನ್ಸ್‌ನ ವಿಷಯದ ಕುರಿತು ಕರೆದ ಮೊದಲ ಸಭೆ ಇದಾಗಿತ್ತು. ಮಾಜಿ ಹಣಕಾಸು ಖಾತೆ ರಾಜ್ಯ ಸಚಿವ ಹಾಗೂ ಬಿಜೆಪಿ ಸಂಸದ ಜಯಂತ್ ಸಿನ್ಹಾ ಸಮಿತಿಯ ನೇತೃತ್ವ ವಹಿಸಿದ್ದರು.
ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು, ಬ್ಲಾಕ್ ಚೈನ್ ಮತ್ತು ಕ್ರಿಪ್ಟೋ ಅಸೆಟ್ಸ್ ಕೌನ್ಸಿಲ್ (BACC), ಉದ್ಯಮ ಸಂಸ್ಥೆಗಳು ಮತ್ತು ಇತರ ಪ್ರತಿನಿಧಿಗಳು ಈ ಸಭೆಯ ಭಾಗವಾಗಿದ್ದರು.ಈ ವೇಳೆ, ಡಿಜಿಟಲ್ ಕರೆನ್ಸಿಯನ್ನು ಸ್ಥಗಿತಗೊಳಿಸಲು ಕಷ್ಟಸಾಧ್ಯ, ಆದರೆ ನಿಯಂತ್ರಿಸಬಹುದು ಎಂಬ ಬಗ್ಗೆ ಒಮ್ಮತಕ್ಕೆ ಬರಲಾಯಿತು. ಆದರೆ, ಇದನ್ನು ನಿಯಂತ್ರಿಸವುದು ಯಾರು ಎಂಬುದರ ಬಗ್ಗೆ ಸ್ಪಷ್ಟ ನಿಲುವು ತಳೆಯಲಿಲ್ಲ. ಪತ್ರಿಕೆಗಳಲ್ಲಿ ಫುಲ್ ಪೇಜ್ ಕ್ರಿಪ್ಟೋ ಕರೆನ್ಸಿಯ ಜಾಹೀರಾತು ಪ್ರಕಟವಾಗುತ್ತಿದೆ ಎಂದು ಸಂಸದರು ಸಭೆಯಲ್ಲಿ ಆಕ್ಷೇಪಿಸಿದರು.
ಕ್ರಿಪ್ಟೋಕರೆನ್ಸಿಯ ಮುಂದಿನ ಹಾದಿಯಲ್ಲಿ ವಿವಿಧ ಸಚಿವಾಲಯಗಳು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಕೆಲವೇ ದಿನಗಳ ನಂತರ ಸಮಿತಿ ಸಭೆಯು ನಡೆದಿದೆ. ಸಭೆಯಲ್ಲಿ ಗಮನಕ್ಕೆ ತರಲಾದ ಎರಡು ಪ್ರಮುಖ ಸಮಸ್ಯೆಗಳೆಂದರೆ, ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಅತಿಯಾದ ಭರವಸೆ ಮತ್ತು ಪಾರದರ್ಶಕತೆಯ ಕೊರತೆ ಬಗ್ಗೆ ಗಮನ ಸೆಳೆಯಲಾಯಿತು.
ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಆರ್​ಬಿಐ ಸುತ್ತೋಲೆಯನ್ನು ಮಾರ್ಚ್ 2020ರ ಆರಂಭದಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇದರ ನಂತರ ಫೆಬ್ರವರಿ 5, 2021ರಂದು, ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿಗೆ ಮಾದರಿಯನ್ನು ಸೂಚಿಸಲು ಕೇಂದ್ರೀಯ ಬ್ಯಾಂಕ್ ಆಂತರಿಕ ಪ್ಯಾನೆಲ್​ ಸ್ಥಾಪಿಸಿದೆ. ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಪ್ರಸರಣವನ್ನು ಎದುರಿಸಲು ಆರ್‌ಬಿಐ ಅಧಿಕೃತ ಡಿಜಿಟಲ್ ಕರೆನ್ಸಿ ಹೊರತರಲು ತನ್ನ ಉದ್ದೇಶವನ್ನು ಪ್ರಕಟಿಸಿದೆ. ಕಳೆದ ವಾರ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕ್ರಿಪ್ಟೋಕರೆನ್ಸಿಗಳ ಸುತ್ತಲಿನ ಕಳವಳಗಳ ಬಗ್ಗೆ ಹೇಳಿದ್ದರು. ಕನಿಷ್ಠ ಅದನ್ನು ನಿಯಂತ್ರಿಸುವವರೆಗೆ ಹಣಕಾಸು ವ್ಯವಸ್ಥೆಗೆ ಬೆದರಿಕೆ ಇದೆ ಎಂದು ಹೇಳಿದ್ದರು.
ಖಾಸಗಿ ಡಿಜಿಟಲ್ ಕರೆನ್ಸಿಗಳು/ವರ್ಚುವಲ್ ಕರೆನ್ಸಿಗಳು/ಕ್ರಿಪ್ಟೋ-ಕರೆನ್ಸಿಗಳು ಕಳೆದ ಒಂದು ದಶಕದಲ್ಲಿ ಜನಪ್ರಿಯತೆಯನ್ನು ಗಳಿಸಿವೆ. ಇಲ್ಲಿ ನಿಯಂತ್ರಕರು ಮತ್ತು ಸರ್ಕಾರಗಳು ಈ ಕರೆನ್ಸಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಮತ್ತು ಸಂಬಂಧಿತ ಅಪಾಯಗಳ ಬಗ್ಗೆ ಅವರಿಗೆ ಆತಂಕವಿದೆ. ವರ್ಚುವಲ್ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಸೇವೆಗಳನ್ನು ಒದಗಿಸುವುದನ್ನು ಬ್ಯಾಂಕ್‌ಗಳು ಮತ್ತು ಸಂಸ್ಥೆಗಳನ್ನು ನಿಷೇಧಿಸುವ ಏಪ್ರಿಲ್ 6, 2018ರ ಆರ್‌ಬಿಐ ಸುತ್ತೋಲೆಯನ್ನು ಮಾರ್ಚ್ 4, 2021ರಂದು ಸುಪ್ರೀಂ ಕೋರ್ಟ್​ನಿಂದ ರದ್ದುಗೊಳಿಸಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement