ಪುನೀತ್‌ ನೆನೆದು ಬಿಕ್ಕಿಬಿಕ್ಕಿ ಅತ್ತ ಶಿವರಾಜಕುಮಾರ-ರಾಘವೇಂದ್ರ ರಾಜಕುಮಾರ

ಬೆಂಗಳೂರು : ನಟ ಪುನೀತ್‌ ರಾಜ್‌ಕುಮಾರ್‌ ಅವ್ರು ನಿಧನರಾಗಿ ಇಂದಿಗೆ 19 ದಿನಗಳಾಗಿವೆ. ಆದ್ರೂ ಕುಟುಂಬಸ್ಥರು ಸೇರಿ ಆಭಿಮಾನಿಗಳ ದುಃಖವಿನ್ನೂ ಕಡಿಮೆಯಾಗಿಲ್ಲ. ಈ ನಡುವೆ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅಪ್ಪು ಕುಟುಂಬಸ್ಥರು ಭಾವುಕರಾಗಿದ್ದು, ಪ್ರೀತಿಯ ತಮ್ಮನನ್ನ ಕಳೆದುಕೊಂಡ ನಟರಾದ ಶಿವರಾಜಕುಮಾರ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುವಾಗ ರಾಘವೇಂದ್ರ ರಾಜ್‌ಕುಮಾರ್‌ ಅವರ ದುಃಖದ ಕಟ್ಟೆಯೊಡೆದಿದ್ದು, ಬಿಕ್ಕಿಬಿಕ್ಕಿ ಅತ್ತಿದ್ದಾರೆ.
“ನಮಗಿಂತ ಚಿಕ್ಕವನು. ನನಗೂ ಮತ್ತು ಮತ್ತು ಶಿವಣ್ಣನಿಗೆ ಮುಖ ನೋಡಿಕೊಳ್ಳಲು ನಾಚಿಕೆ ಆಗುತ್ತಿದೆ. ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲು ನಮಗೆ ಆಗುತ್ತಿಲ್ಲ.
ದಯವಿಟ್ಟು ನನ್ನನ್ನು ಕಳುಹಿಸಿಕೊಡಿ, ಅವನನ್ನ ಕರೆದುಕೊಂಡು ಬನ್ನಿ. ಅಪ್ಪು ಮಗನೆ.. ದಯವಿಟ್ಟು ನಾನು ಹೋಗ್ತಿನಿ, ನೀನು ಬಂದ್‌ ಬಿಡು ಕಂದ” ಎಂದು ಹೇಳುತ್ತ ಅತ್ತರು.ಇಪತ್ತು ದಿನಗಳಿಂದ ನಾನು ದುಃಖವನ್ನು ತಡೆದುಕೊಂಡಿದ್ದೆ. ನಾನು ಅತ್ತರೆ ಅಪ್ಪು ಪತ್ನಿ ಮತ್ತು ಮಕ್ಕಳು ದುಃಖ ಪಡುತ್ತಾರೆ ಎಂಬ ಕಾರಣಕ್ಕೆ ತಡೆದುಕೊಂಡಿದ್ದೆ. ಆದರೆ ನನಗೆ ಇವತ್ತು ದುಃಖ ತಡೆದುಕೊಳ್ಳಲು ಆಗುತ್ತಿಲ್ಲ ಎಂದರು.
ಅಪ್ಪ ನಿಧನರಾದಾಗ ಕಾರ್ಯಕ್ರಮದಲ್ಲಿ ನನ್ನ ಆಯುಷ್ಯ ನಿನಗೆ ಕೊಡುತ್ತೇನೆ ಎಂದು ನಾನು ಹೇಳಿದ್ದೆ. ಆದರೆ ಈಗ ನೋಡಿದರೆ ಅವನು ತನ್ನ ಆಯುಷ್ಯ ನಮಗೆ ಕೊಟ್ಟು ಹೋಗಿದ್ದಾನೆ. ಜನಿಸಿದಾಗ ತಮ್ಮನಾಗಿ ಬಂದ.. ಈಗ ಅಪ್ಪನಾಗಿ ಹೋಗಿದ್ದಾನೆ. ನನಗೆ ಹಾಗೂ ಶಿವರಾಜಕುಮಾರ ಅವರಿಗೆ ಬದುಕುವುದು ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಶಿವರಾಜ್​ಕುಮಾರ್ ಕೂಡ ಕಣ್ಣೀರು ಹಾಕಿದ್ದಾರೆ. ಮಾತನಾಡಲು ತುಂಬ ಕಷ್ಟವಾಗುತ್ತಿದೆ. ಎಲ್ಲರೂ ಅವನ ಬಗ್ಗೆ ಮಾತನಾಡುತ್ತಿದ್ದಾರೆ. ಅವನ ಬಗ್ಗೆ ಮಾತನಾಡಲು ಏನೂ ಉಳಿದಿಲ್ಲ. ನನ್ನ ದೃಷ್ಟಿಯೇ ಅವನ ಮೇಲೆ ಬಿತ್ತೇನೋ ಅನಿಸುತ್ತದೆ ಎಂದು ಹೇಳುತ್ತ ದುಃಖಿಸಿದರು.
ಎಲ್ಲರೂ ಯಾಕೆ ಅಷ್ಟೊಂದು ಹೊಗಳ್ತೀಯಾ ಎಂದು ಕೇಳುತ್ತಿದ್ದರು. ಅವನಿಗೆ ಹೊಗಳಿಸಿಕೊಳ್ಳುವ ಅರ್ಹತೆ ಇದೆ. ನನಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಆದರೆ, ಪುನೀತ್​ನಿಂದ ಸ್ಫೂರ್ತಿ ತೆಗೆದುಕೊಂಡೆ. ಶಿವಣ್ಣ ನನ್ನ ಸ್ಫೂರ್ತಿ ಎಂದು ಅಪ್ಪು ಹೇಳ್ತಾನೆ. ಆದರೆ, ಹಾಗಲ್ಲ. ಹಾಗೆ ಹೇಳುವುದು ಅವನ ದೊಡ್ಡ ಗುಣ. ಆದರೆ ನಮಗೆ ಸ್ಫೂರ್ತಿ ಅವನೇ ಆಗಿದ್ದ. ಈಗ ಅವನೇ ಇಲ್ಲ ಎಂದು ಹೇಳುತ್ತ ಅತ್ತರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement