ಇದು ಅಪರೂಪದಲ್ಲಿ ಅಪರೂಪದ ಘಟನೆ..:ಮುಂಬೈನಲ್ಲಿ ಚರಂಡಿಯಲ್ಲಿದ್ದ ನವಜಾತ ಶಿಶುವನ್ನು ರಕ್ಷಿಸಿದ ಬೆಕ್ಕುಗಳು..!

ಮುಂಬೈ: ಒಂದು ಅಪರೂಪದ ವಿದ್ಯಮಾನದಲ್ಲಿ ಮುಂಬೈನಲ್ಲಿ ಬೆಕ್ಕುಗಳು ನವಜಾತ ಶಿಶುವನ್ನು ಉಳಿಸಿದ ವಿಶಿಷ್ಟ ಘಟನೆ ವರದಿಯಾಗಿದೆ.
ಮುಂಬೈನ ಪಂತ ನಗರದಲ್ಲಿ ನೀರು ಹರಿಯುವ ಚರಂಡಿಯಲ್ಲಿತ್ತು. ಬೆಕ್ಕುಗಳು ಮೊದಲು ಅವನನ್ನು ನೋಡಿದವು ಮತ್ತು ಈ ಬೆಕ್ಕುಗಳು ವಿಶಿಷ್ಟ ಧ್ವನಿಗಳನ್ನು ಹೊರಡಿಸುವ ಮೂಲಕ ಸುತ್ತಲಿನ ಜನರನ್ನು ಎಚ್ಚರಿಸಿದವು. ಈ ಬೆಕ್ಕುಗಳ ವಿಚಿತ್ರ ಧ್ವನಿ ಕೇಳಿದ ಜನರು ಕುತೂಹಲದಿಂದ ಅಲ್ಲಿಗೆ ಬಂದಾಗ ಚರಂಡಿಯಲ್ಲಿ ಈ ನವಜಾತ ಶಿಶು ಇರುವುದು ಗೊತ್ತಾಗಿದೆ. ನಂತರ ಅಲ್ಲಿ ಸೇರಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಬೈ ಪೊಲೀಸರು ಸ್ಥಳಕ್ಕಾಗಮಿಸಿ ನವಜಾತ ಶಿಶುವನ್ನು ಚರಂಡಿಯಿಂದ ಹೊರತೆಗೆದು ಆಸ್ಪತ್ರೆಗೆ ಕೊಂಡೊಯ್ಯುವ ಮೂಲಕ ಮಗುವಿನ ಪ್ರಾಣ ಉಳಿಸಿದ್ದಾರೆ.
ಈ ಘಟನೆಯ ಬಗ್ಗೆ ಮುಂಬೈ ಪೊಲೀಸರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಲಾಗಿತ್ತು ಎಂದು ಅವರು ಹೇಳಿದ್ದಾರೆ. ಶಿಶುವನ್ನು ನೋಡಿ ಬೆಕ್ಕುಗಳು ವಿಚಿತ್ರ ಶಬ್ದ ಮಾಡಲು ಪ್ರಾರಂಭಿಸಿದವು. ಇದಾದ ಬಳಿಕ ಜನರ ಗಮನ ನವಜಾತ ಶಿಶುವಿನತ್ತ ಹೋಯಿತು. ಈತನನ್ನು ಕಂಡ ತಕ್ಷಣ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರ ನಿರ್ಭಯಾ ದಳವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.

https://twitter.com/MumbaiPolice/status/1460262072504049666?ref_src=twsrc%5Etfw%7Ctwcamp%5Etweetembed%7Ctwterm%5E1460262072504049666%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Fmumbai-news%2Fmumbai-police-rescue-newborn-from-drain-after-cats-alert-residents-2613838

ಪೋಲೀಸ್ ತಂಡ ಮಗುವನ್ನು ಚರಂಡಿಯಿಂದ ಹೊರತೆಗೆದು ರಾಜವಾಡಿ ಆಸ್ಪತ್ರೆಗೆ ಕೊಂಡೊಯ್ದಿತು. ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ನವಜಾತ ಶಿಶು ಅಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದೆ ಎಂದು ಹೇಳಿ ಪೊಲೀಸರು ನವಜಾತ ಶಿಶುವಿನ ಫೋಟೋವನ್ನು ಸಹ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಆದರೆ, ಮಗುವಿನ ಪೋಷಕರು ಅಥವಾ ಅವನನ್ನು ಚರಂಡಿಗೆ ಬಿಟ್ಟವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement