ಭಾರತದಲ್ಲಿ 11,919 ಹೊಸ ಕೋವಿಡ್-19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,919 ಹೊಸ ಪ್ರಕರಣಗಳು ದಾಖಲಾಗಿದೆ. 11,242 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾಋೆ ಹಾಗೂ 470 ಸಾವುಗಳು ವರದಿಯಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಸಕ್ರಿಯ ಪ್ರಕರಣ 1,28,762ಕ್ಕೆ ಈಗ ಏರಿದೆ. ಕೇರಳದಲ್ಲಿ 6,849 ಹೊಸ ಪ್ರಕರಣಗಳು, 6,046 ಚೇತರಿಕೆ ಮತ್ತು 61 ಸಾವುಗಳು ವರದಿಯಾಗಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ -19 ಕ್ಯಾಸೆಲೋಡ್‌ನಲ್ಲಿ 207 ಪ್ರಕರಣಗಳ ಹೆಚ್ಚಳ ದಾಖಲಾಗಿದೆ. ದೈನಂದಿನ ಧನಾತ್ಮಕತೆಯ ದರವು ಶೇಕಡಾ 0.97 ರಷ್ಟು ದಾಖಲಾಗಿದೆ. ಸತತ 45 ದಿನಗಳಿಂದ ಶೇ.2ಕ್ಕಿಂತ ಕಡಿಮೆಯಾಗಿದೆ. ಸಾಪ್ತಾಹಿಕ ಸಕಾರಾತ್ಮಕತೆಯ ದರವು 0.94 ಶೇಕಡಾದಲ್ಲಿ ದಾಖಲಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 55 ದಿನಗಳಿಂದ ಇದು ಶೇಕಡಾ ಎರಡಕ್ಕಿಂತ ಕಡಿಮೆಯಾಗಿದೆ.

0 / 5. 0

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ನಿಮ್ಮ ಕಾಮೆಂಟ್ ಬರೆಯಿರಿ

advertisement