ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ಮೂರು ಕಪ್ಪು ಸರ್ಪಗಳ ಫೋಟೋಗಳು..!

ನವದೆಹಲಿ: ಡಿಜಿಟಲ್ ಕ್ರಾಂತಿಯ ನಂತರ ಪ್ರಾಣಿ ಪ್ರಪಂಚದ ವಿಡಿಯೋಗಳು, ಫೋಟೋಗಳು ಕೂಡ ಈಗ ಜನಮಾನಸದಲ್ಲಿ ಭಾರೀ ಸಂವೇದನೆಯ ವಿಷಯವಾಗಿದೆ, ಇಂಥದ್ದೇ ಸಂವೇದನೆ ಉಂಟು ಮಾಡುವ ಕಪ್ಪು ಬಣ್ಣದ ಮೂರು ಹಾವುಗಳ ಈ ಫೋಟೋ ಅಂತರ್ಜಾಲದಲ್ಲಿ ಭಾರೀ ವೈರಲ್‌ ಆಗಿದೆ.
ದು ಮಹಾರಾಷ್ಟ್ರದಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದ್ದು. ಮೂರು ಕಪ್ಪುಬಣ್ಣದ ಸರ್ಪಗಳ ಚಿತ್ರವೊಂದು ನೆಟ್ಟಲ್ಲಿ ಭಾರೀ ಸದ್ದು ಮಾಡಿದೆ.ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಈ ಫೋಟೋ ಹಂಚಿಕೊಂಡಿದ್ದು, ಅಮರಾವತಿ ಜಿಲ್ಲೆಯ ಹರಿಸಲ್ ಕಾಡಿನಲ್ಲಿ ಮರದ ತೊಗಟೆಯ ಸುತ್ತಲೂ ಮೂರು ನಾಗರಹಾವುಗಳು ಸುತ್ತಿರುವುದನ್ನು ಕಾಣಬಹುದಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಈ ಚಿತ್ರಗಳನ್ನು ಮೊದಲು ಭಾರತೀಯ ವನ್ಯಜೀವಿ ಹೆಸರಿನ ಫೇಸ್‌ಬುಕ್ ಗುಂಪಿನಲ್ಲಿ ಹಂಚಿಕೊಳ್ಳಲಾಯಿತು ಮತ್ತು ಹಾವುಗಳನ್ನು ರಕ್ಷಿಸಿ ಹರಿಸಲ್ ಕಾಡಿನಲ್ಲಿ ಬಿಡುಗಡೆ ಮಾಡಿದ ನಂತರ ತೆಗೆಯಲಾಗಿದೆ ಎಂದು ಹೇಳಲಾಗಿದೆ.

ಐಎಫ್‌ಎಸ್ ಅಧಿಕಾರಿ ನಂದಾ ಅವರು ನವೆಂಬರ್ 16 ರಂದು ಟ್ವೀಟ್ ಮಾಡಿ, ‘ಆಶೀರ್ವಾದಗಳು… ಒಂದೇ ಸಮಯದಲ್ಲಿ ಮೂರು ನಾಗರ ಹಾವುಗಳು ನಿಮ್ಮನ್ನು ಆಶೀರ್ವದಿಸಿದಾಗ.’ ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ʼಹಿಂದೂʼ ವಿರೋಧಿ ನಿಲುವಿನ ಉದಯನಿಧಿ ಸ್ಟಾಲಿನ್‌ ಬಾಯಲ್ಲಿ 'ಓಂ ಕಾಳಿ..ಜೈ ಕಾಳಿ' ಸ್ಲೋಗನ್‌ : ಎಲ್ಲೆಡೆ ಹೇಳಲು ಪಕ್ಷದವರಿಗೆ ಕರೆ !

ಆದರೆ ಈ ಸರ್ಪಗಳ ಕಪ್ಪು ಬಣ್ಣವು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮೂರು ಸರ್ಪಗಳು ಒಂದೇ ಮರಕ್ಕೆ ಒಂದೇ ಬದಿಗೆ ಸುತ್ತಿಕೊಂಡು ಹೆಡೆ ಎತ್ತಿವೆ.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement