ವಿಧಾನ ಪರಿಷತ್ ಚುನಾವಣೆ: ಬಿಜೆಪಿಯಿಂದ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನಪರಿಷತ್​ ಚುನಾವಣೆ ಡಿಸೆಂಬರ್ 10 ರಂದು ನಡೆಯಲಿದೆ. ಈ ಹಿನ್ನೆಲೆ 25 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಲಿ ಸದಸ್ಯರ ಪೈಕಿ ಕೊಡಗು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಹಾಲಿ ಎಂಎಲ್​ಸಿ ಸುನಿಲ್ ಸುಬ್ರಮಣಿ ಸೋದರನಿಗೆ ಟಿಕೆಟ್​ ನೀಡಲಾಗಿದೆ. ಸುನಿಲ್ ಸುಬ್ರಮಣಿ ಸಹೋದರ ಸುಜಾ ಕುಶಾಲಪ್ಪಗೆ ಟಿಕೆಟ್​ ಕೊಡಲಾಗಿದೆ. ಶಿವಮೊಗ್ಗದಲ್ಲಿ ವಿಧಾನಪರಿಷತ್​ನ ಮಾಜಿ ಸಭಾಪತಿ ಶಂಕರಮೂರ್ತಿ ಪುತ್ರ ಅರುಣ್​ಗೆ ಟಿಕೆಟ್​ ನೀಡಲಾಗಿದೆ.

ಡಿಸೆಂಬರ್ 10 ರಂದು ವಿಧಾನಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬಿಜೆಪಿಯಿಂದ 20 ಅಭ್ಯರ್ಥಿಗಳ ಹೆಸರು ಇಂತಿದೆ.

ದಕ್ಷಿಣ ಕನ್ನಡ- ಕೋಟ ಶ್ರೀನಿವಾಸ ಪೂಜಾರಿ
ಚಿಕ್ಕಮಗಳೂರು- ಎಂ.ಕೆ. ಪ್ರಾಣೇಶ್
ಶಿವಮೊಗ್ಗ- ಡಿ.ಎಸ್. ಅರುಣ್
ಧಾರವಾಡ- ಪ್ರದೀಪ್ ಶೆಟ್ಟರ್
ಬೆಳಗಾವಿ- ಮಹಾಂತೇಶ್ ಕವಟಗಿಮಠ
ಕಲಬುರಗಿ- ಬಿ.ಜಿ. ಪಾಟೀಲ್
ಚಿತ್ರದುರ್ಗ- ಕೆ.ಎಸ್. ನವೀನ್
ಮೈಸೂರು- ರಘು ಕೌಟಿಲ್ಯ
ಹಾಸನ- ವಿಶ್ವನಾಥ್
ಉತ್ತರ ಕನ್ನಡ- ಗಣಪತಿ ಉಳ್ವೇಕರ್
ಬೀದರ್- ಪ್ರಕಾಶ್ ಖಂಡ್ರೆ
ಬೆಂಗಳೂರು ನಗರ- ಗೋಪಿನಾಥ್ ರೆಡ್ಡಿ
ಮಂಡ್ಯ- ಮಂಜು ಕೆ.ಆರ್. ಪೇಟೆ
ಕೋಲಾರ- ಡಾ.ಕೆ.ಎನ್‌. ವೇಣುಗೋಪಾಲ್
ರಾಯಚೂರು- ವಿಶ್ವನಾಥ್ ಬನಹಟ್ಟಿ
ಬೆಂಗಳೂರು ಗ್ರಾಮಾಂತರ- ಬಿ.ಎಂ. ನಾರಾಯಣಸ್ವಾಮಿ
ಬಳ್ಳಾರಿ- ವೈ.ಎಮ್. ಸತೀಶ್
ತುಮಕೂರು- ಎನ್. ಲೋಕೇಶ್
ವಿಜಯಪುರ- ಪಿ.ಹೆಚ್. ಪೂಜಾರ್
ದ್ವಿಸದಸ್ಯ ಕ್ಷೇತ್ರಗಳಲ್ಲಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಸ್ಪರ್ಧೆ ಮಾಡಲಿದೆ.  

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement