ಕುಲಗಾಂವ್: ಹಿಜ್ಬುಲ್​ ಮುಜಾಹಿದ್ದೀನ್ ಕಮಾಂಡರ್‌ ಸೇರಿ ಇಬ್ಬರು ಭಯೋತ್ಪಾದಕ ಹತ್ಯೆ; ಶಾಲಾ ಮಕ್ಕಳು ಸೇರಿ 60 ಮಂದಿ ರಕ್ಷಣೆ

ಶ್ರೀನಗರ: ಜಮ್ಮು-ಕಾಶ್ಮೀರದ ಕುಲಗಾಂವ್​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್​ಕೌಂಟರ್​ ನಡೆಯುತ್ತಿದೆ. ಇಲ್ಲಿಯವರೆಗೆ ರಕ್ಷಣಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಎನ್​ಕೌಂಟರ್​ನಲ್ಲಿ ಹತ್ಯೆಯಾದ ಇಬ್ಬರು ಉಗ್ರರಲ್ಲಿ ಒಬ್ಬಾತ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಯ ಕಮಾಂಡರ್​​ ಎಂದು ಗುರುತಿಸಲಾಗಿದೆ
ಎನ್​ಕೌಂಟರ್​ ನಡೆಯುತ್ತಿರುವ ಸ್ಥಳದಿಂದ ಶಾಲಾ ಮಕ್ಕಳು ಸೇರಿ ಸುಮಾರು 60 ಜನರನ್ನು ಭದ್ರತಾ ಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕುಲಗಾಂವ್​​ನ ಅಶ್ಮುಂಜಿ ಎಂಬಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದಿದ್ದವು. ಸೈನಿಕರು ಪ್ರದೇಶವನ್ನು ಸುತ್ತುವರಿದು ಹುಡುಕಾಟ ನಡೆಸುತ್ತಿದ್ದಂತೆ ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಲು ಶುರು ಮಾಡಿದರು. ಆಗ ಭದ್ರತಾ ಸಿಬ್ಬಂದಿಯೂ ಪ್ರತಿದಾಳಿ ನಡೆಸಲು ಶುರು ಮಾಡಿದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಒಂದೆಡೆ ಎನ್​ಕೌಂಟರ್​ ಶುರುವಾಗಿತ್ತು..ಇನ್ನೊಂದೆಡೆ ಅಲ್ಲಿದ್ದ ನಾಗರಿಕರನ್ನು ರಕ್ಷಣೆ ಮಾಡುವ ಕಾರ್ಯವೂ ನಡೆದಿತ್ತು. ಶಾಲಾ ಮಕ್ಕಳೂ ಸೇರಿ ಸುಮಾರು 60 ಜನರನ್ನು ಭದ್ರತಾ ಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರ ವಿರುದ್ಧ ಇನ್ನೂ ಕಾರ್ಯಾಚರಣೆ ಮುಂದುವರಿದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ