‘ಮಹಾಂತ ನರೇಂದ್ರ ಗಿರಿ’ ಸಾವಿನ ಪ್ರಕರಣ :ಮೂವರು ಆರೋಪಿಗಳ ವಿರುದ್ಧ ಸಿಬಿಐನಿಂದ ಚಾರ್ಜ್ ಶೀಟ್ ಸಲ್ಲಿಕೆ

ನವದೆಹಲಿ : ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಇಂದು ಅವರ ಶಿಷ್ಯಂದಿರರಾದ ಆನಂದ್ ಗಿರಿi, ಸಂದೀಪ್ ತಿವಾರಿ ಮತ್ತು ಆತನ ಪುತ್ರ ಆದ್ಯ ತಿವಾರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಈ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಯಾಗ್ ರಾಜ್ ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಸಿಬಿಐ ಆರೋಪಟ್ಟಿ ಸಲ್ಲಿಸಿದೆ. . ಕೋರ್ಟ್ ನವೆಂಬರ್ 25ರಂದು ವಿಚಾರನೆ ನಿಗದಿ ಮಾಡಿದೆ. ಅಲ್ಲಿವರೆಗೆ ಮೂವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿದೆ.
ಮಹಾಂತ ನರೇಂದ್ರ ಗಿರಿ ಸೆಪ್ಟೆಂಬರ್​ 20ರಂದು ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನ ಆಶ್ರಮದ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳೆಯೊಬ್ಬರ ಜೊತೆಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ಚಿತ್ರವೊಂದನ್ನು ಮಾಡಿರುವ ಶಿಷ್ಯ ಆನಂದ್ ಗಿರಿ ವೈರಲ್ ಮಾಡಲು ಯತ್ನಿಸುವ ಬೆದರಿಕೆ ಹಾಕುತ್ತಿದ್ದಾನೆ. ಇಷ್ಟು ವರ್ಷ ಘನತೆಯಿಂದ ಬದುಕಿದ ನಾನು ಇಂಥ ಅವಮಾನ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಎಂದು ಡೆತ್‌ನೋಟ್‌ ಬರದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಹಾಂತ ನರೇಂದ್ರ ಗಿರಿಯವರು ಕೆಲವು ಜನರ ಹೆಸರನ್ನು ಉಲ್ಲೇಖಿಸಿ, ಅವರು ನನಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ತುಂಬ ಘನತೆಯಿಂದ ಜೀವನ ನಡೆಸುತ್ತಿದ್ದೇನೆ. ಅವಮಾನಗಳನ್ನು ಸಹಿಸುತ್ತ ಬದುಕಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ನಾನು ನನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತಿದ್ದೇನೆ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ