ಕೆಂಪಾದವೋ ಎಲ್ಲ ಕೆಂಪಾದವೋ.. ಎಲ್ಲಿ ನೋಡಿದರೂ ಕಾಣುವುದೆಲ್ಲ ಕೆಂಪು ಏಡಿಗಳೇ..!

ಇಂಟರ್ನೆಟ್‌ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಅಚ್ಚರಿಗೊಳಿಸುವ ಸಂಗತಿಗಳಿಗೇನು ಕೊರತೆಯಿಲ್ಲ. ಈಗ ಅಂಥದ್ದೇ ಒಂದು ಅಚ್ಚರಿ ತರುವ ವಿಡಿಯೊ ವೈರಲ್‌ ನೆಟ್ಟಿಗರ ಗಮನ ಸೆಳೆದಿದೆ.
ಇದನ್ನು ನೋಡಿದರೆ ಎಂಥವರೂ ಬೆರಗಾಗಲೇಬೇಕು. ಇದು ಮಹಾವಲಸೆ. ಆಫ್ರಿಕಾದಲ್ಲಿ ಕಂಡುಬರುವ ಪ್ರಾಣಿಗಳ ಮಹಾವಲಸೆಯಲ್ಲಿ, ಬದಲಾಗಿ ಇದು ಕೆಂಪು ಏಡಿಗಳ ಮಹಾವಲಸೆಯ ಕಣ್ಣನ ಸೆಳೆಯುವ ದೃಶ್ಯ.

ಈಗ ಆಸ್ಟ್ರೇಲಿಯಾದ ಕ್ರಿಸ್ಮಸ್ ದ್ವೀಪದ ರಸ್ತೆ, ಸೇತುವೆ, ಉದ್ಯಾನವನವನ್ನೆಲ್ಲಾ ಈ ಕೆಂಪು ಏಡಿಗಳೇ ತುಂಬಿಕೊಂಡಿವೆ. ದೃಷ್ಟಿ ಹಾಯಿಸಿದಲ್ಲೆಲ್ಲಾ ಈ ಕೆಂಪು ಏಡಿಗಳೇ ಕಾಣುತ್ತವೆ.

ವಾಯವ್ಯ ಆಸ್ಟ್ರೇಲಿಯಾದಲ್ಲಿರುವ ಈ ಸಣ್ಣ ದ್ವೀಪ ಪ್ರತಿವರ್ಷವೂ ಇಂತಹ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತದೆ. ಈ ಏಡಿಗಳ ಒಟ್ಟು ಸಂಖ್ಯೆ ಸುಮಾರು 50 ಮಿಲಿಯನ್ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ದ್ವೀಪದಲ್ಲಿರುವ ಈ ಎಲ್ಲ ಕೆಂಪು ಏಡಿಗಳು ಒಮ್ಮೆಗೇ ಗುಂಪು ಗುಂಪಾಗಿ ವಲಸೆ ಆರಂಭಿಸುತ್ತವೆ. ಸಂಯೋಗ ಮತ್ತು ಸಂತಾನೋತ್ಪತ್ತಿ ಕಾರಣದಿಂದ ಈ ಏಡಿಗಳು ಸಮುದ್ರದ ಕಡೆಗೆ ಸಾಗುತ್ತವೆ. ಈ ವಲಸೆಯ ದೃಶ್ಯವೇ ಅದ್ಭುತ ಮತ್ತು ಮನಮೋಹಕ. ಯಾರೂ ಈ ಏಡಿಗಳಿಗೆ ತೊಂದರೆ ಕೊಡುವುದಿಲ್ಲ.ಸದ್ಯ ಈ ಕೆಂಪು ಏಡಿಗಳ ವಲಸೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ದೃಶ್ಯವನ್ನು ನೋಡಿದವರೆಲ್ಲಾ ಸಹಜವಾಗಿಯೇ ಅಚ್ಚರಿಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

 

ಪ್ರಮುಖ ಸುದ್ದಿ :-   ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement