ಭಟ್ಕಳ ಸಮೀಪ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಬೃಹತ್‌ ತಿಮಿಂಗಲ…! ವಿಡಿಯೊದಲ್ಲಿ ಸೆರೆ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ತಿಮಿಂಗಿಲವೊಂದು ಕಾಣಿಸಿಕೊಂಡು ಮೀನುಗಾರರು ಆತಂಕಕ್ಕೆ ಒಳಗಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಬ್ಬಿ ಸಮುದ್ರದ ಕಡಲ ತೀರದಲ್ಲಿ ನಡೆದಿದೆ.
ಸಾಮಾನ್ಯವಾಗಿ ತಿಮಿಂಗಲುಗಳು ಆಳಸಮುದ್ರದಲ್ಲಿ ಇರುತ್ತವೆ. ಮತ್ತು ಕಾಣಿಸಿಕೊಳ್ಳುವುದು ಅಪರೂಪ. ಇಂದು (ಶನಿವಾರ) ಬೆಳಿಗ್ಗೆ ಸಮುದ್ರದಲ್ಲಿ ಅದು ಮೀನುಗಾರರಿಗೆ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಮೀನುಗಾರರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಈ ಬೃಹತ್‌ ತಿಮಿಂಗಲು ತನ್ನ ಬೃಹತ್‌ ಬಾಲವನ್ನು ನೀರಿಗೆ ಬಡಿಯುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ. ಅದು ಬಡಿದ ರಭಸಕ್ಕೆ ನೀರಿನಲ್ಲಿ ಬೃಹತ್‌ ಅಲೆ ಎದ್ದಿದೆ. ಮೀಗಾರರ ಬೀಟ್‌ ಅದಕ್ಕೆ ಬಹಳ ಸಮೀಪದಲ್ಲಿಯೇ ಇತ್ತು.
ಸಮುದ್ರದಲ್ಲಿ ಹವಾಮಾನ ವೈಪರೀತ್ಯವಾದ್ದರಿಂದ ಬೃಹತ್ ಗಾತ್ರದ ತಿಮಿಂಗಿಲವು ತೀರ ಪ್ರದೇಶಗಳತ್ತ ಆಹಾರ ಅರಸಿ ಬರುತ್ತಿರಬಹುದು ಎಂದು ಹೇಳಲಾಗಿದೆ.

ಕೆಲ ದಿನಗಳ ಹಿಂದೆ ಕುಮಟಾದ ಬಾಡ, ಕಾರವಾರ ಕಡಲ ತೀರಗಳಲ್ಲಿ ಅಪರೂಪದ ಶಾರ್ಕ್ ಮೀನು, ಹಾಕ್ಸ್ ಬಿಲ್ ಮತ್ತು ಡಾಲ್ಫಿನ್‌ಗಳ ಹಾಗೂ ಆಮೆಗಳ ಕಳೇಬರ ಪತ್ತೆಯಾಗಿದ್ದವು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement