ನಟ ಕಮಲ್ ಹಾಸನ್ ಗೆ ಕೊರೊನಾ ಸೋಂಕು

ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ಅವರಿಗೆ ಕೊರೊನಾ ದೃಢಪಟ್ಟಿದೆ. ಅವರಿಗೆ ಸಣ್ಣ ಪ್ರಮಾಣದ ಕೊವೀಡ್-19 ಲಕ್ಷಣಗಳಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರು ಇತ್ತೀಚಿಗಷ್ಟೇ ಅಮೆರಿಕಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿಂದ ಮರಳಿದ ನಂತರ ಅವರಿಗೆ ಸಣ್ಣ ಪ್ರಮಾಣದ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ತಕ್ಷಣವೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದರು. ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಮಲ್ ಹಾಸನ್, ಅಮೆರಿಕದಿಂದ ವಾಪಸ್ ಬಂದ ಬಳಿಕ ನನಗೆ ಸಣ್ಣದಾಗಿ ಕೆಮ್ಮು ಆರಂಭವಾಗಿತ್ತು. ಪರೀಕ್ಷೆ ಮಾಡಿಸಿದ ನಂತರ ಕೋವಿಡ್-19 ಪಾಸಿಟಿವ್ ಎಂಬುದು ತಿಳಿದುಬಂತು. ನಾನೀಗ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿದ್ದೇನೆ. ಒಂದು ಅರಿವಾಗಿದ್ದೇನೆಂದರೆ, ಈ ಮಹಾಮಾರಿ ನಮ್ಮನ್ನು ಬಿಟ್ಟು ಇನ್ನೂ ಹೋಗಿಲ್ಲ. ನಾವೆಲ್ಲ ಸುರಕ್ಷಿತವಾಗಿ ಇರಬೇಕಿದೆ’ ಎಂದು ಬರೆದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ