ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಮತ್ತೆ ಮಳೆ ಅಬ್ಬರ, ಹಲವೆಡೆ ನೀರು ನಿಂತು ತೊಂದರೆ

posted in: ರಾಜ್ಯ | 0

ಬೆಂಗಳೂರು: ನವೆಂಬರ್ 21 ರ ಭಾನುವಾರ ರಾತ್ರಿ ಭಾರೀ ಮಳೆಯ ನಂತರ ಬೆಂಗಳೂರಿನ ಹಲವಾರು ಭಾಗಗಳು ಜಲಾವೃತಗೊಂಡವು. ಸ್ವಲ್ಪ ಸಮಯದ ವಿರಾಮದ ನಂತರ ಮಳೆಯು ಮತ್ತೆ ಭಾನುವಾರ ಅಬ್ಬರಿಸಿದೆ.
ಭಾನುವಾರ ರಾತ್ರಿ, ಉತ್ತರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಮಳೆ ಸುರಿದಿದೆ. ಬಾಗಲೂರಿನಲ್ಲಿ ರಾತ್ರಿ 11.15ಕ್ಕೆ 74ಮಿ.ಮೀ., ಬೆಂಗಳೂರು ಪೂರ್ವದ ಕಣ್ಣೂರಿನಲ್ಲಿ 125ಮಿ.ಮೀ., ಅತ್ತೂರಿನಲ್ಲಿ 125.5ಮಿ.ಮೀ., ಸಾತನೂರಿನಲ್ಲಿ 73.5ಮಿ.ಮೀ. ರಾತ್ರಿ 10.15ರ ವೇಳೆಗೆ ಯಲಹಂಕದಲ್ಲಿ 128 ಮಿ.ಮೀ ಮಳೆ, ಚೌಡೇಶ್ವರಿ ವಾರ್ಡ್ ನಲ್ಲಿ 127.50 ಮಿ.ಮೀ. ರಾತ್ರಿ 10 ಗಂಟೆಗೂ ಮುನ್ನ ಜಕ್ಕೂರಿನಲ್ಲಿ 65.5 ಮಿ.ಮೀ, ಹೊರಮಾವು 73 ಮಿ.ಮೀ. ಮಳೆ ರಾತ್ರಿ 10 ಗಂಟೆಗೆ ದಾಖಲಾಗಿದೆ.
ಹೆಬ್ಬಾಳ ಸಮೀಪದ ನಾಗವಾರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ತೀವ್ರ ಜಲಾವೃತವಾಗಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.
ಕರ್ನಾಟಕದಲ್ಲಿ ನವೆಂಬರ್‌ನಿಂದ ಸುರಿದ ಭಾರೀ ಮಳೆಗೆ ಸಂಬಂಧಿಸಿದ ದುರಂತಗಳಿಂದ ಈವರೆಗೆ 24 ಜನರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಐದು ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಬೆಳೆ ನಷ್ಟವಾಗಿದೆ. 658 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 8,495 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಇದು ರಾಜ್ಯದಲ್ಲಿ 191 ಜಾನುವಾರುಗಳ ಸಾವಿಗೆ ಕಾರಣವಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಜಿಲ್ಲೆಗಳು ಅಪಾರ ನಷ್ಟ ಅನುಭವಿಸಿವೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ 689 ಕೋಟಿ ರೂ. ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ