ಮನ ಗೆಲ್ಲುವ ಮೊಬೈಲ್​ನಲ್ಲಿ ವಿಡಿಯೊ ನೋಡಿದ ಮಂಗಗಳ ಪ್ರತಿಕ್ರಿಯೆ…! ವೀಕ್ಷಿಸಿ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ತಮಾಷೆಯ ವಿಡಿಯೊಗಳು ಮನ ಗೆಲ್ಲುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಮೂರು ಕೋತಿಗಳು ಮೊಬೈಲ್ ನೋಡುತ್ತಿವೆ. ವಿಡಿಯೊ ನೋಡಿದ ಕೋತಿಗಳ ಪ್ರತಿಕ್ರಿಯೆ ಹೇಗೆ ಸ್ವಾರಸ್ಯಕರವಾಗಿತ್ತು ಎಂಬುದನ್ನು ಈ ವಿಡಿಯೊದಲ್ಲಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೊ ನೋಡಿದ ನೆಟ್ಟಿಗರು ಮಂಗಗಳ ಪ್ರತಿಕ್ರಿಯೆಗೆ ತಮಾಷೆ ಮಾಡಿದ್ದಾರೆ. ಮೂರು ಕೋತಿಗಳು ಸ್ಮಾರ್ಟ್ ಫೋನ್ ಹಿಡಿದು ವಿಡಿಯೊ ನೋಡುತ್ತಾ ಅಚ್ಚರಿಗೊಳಗಾಗಿವೆ. 15 ಸೆಕೆಂಡುಗಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೊ ನೋಡಿದರೆ ನಮಗೆ ನಗು ಬರುವುದು ಪಕ್ಕಾ.
ಮನುಷ್ಯರಂತೆಯೇ ವರ್ತಿಸುವ ಕೋತಿಗಳು ತುಂಬಾ ಬುದ್ಧಿವಂತ. ಅದು ಸ್ಮಾರ್ಟ್‌ ಫೋನ್‌ ಕೈಯಲ್ಲಿ ಹಿಡಿದು ನೋಡುವ ರೀತಿ ಬಹಳ ಅದ್ಭುತವಾಗಿದೆ. ವಿಡಿಯೊವನ್ನು ಸುಮಾರು 5 ಮಿಲಿಯನ್​ಗೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಮಂಗಗಳು ಸ್ಮಾರ್ಟ್ ಫೋನ್ ಹಿಡಿದ ರೀತಿ ತುಂಬಾ ಅದ್ಭುತವಾಗಿದೆ ಎಂದು ಕೆಲವರು ಹೇಳಿದ್ದಾರೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ