ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್ಸಿನಿಂದ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಲಾಗಿದೆ. ಮಂಥರ್ ಗೌಡಗೆ ಕೊಡಗಿನಿಂದ ಟಿಕೆಟ್ ನೀಡಲಾಗಿದೆ. ಬಿಜೆಪಿ ನಾಯಕ ಎ. ಮಂಜು ಪುತ್ರನಿಗೆ ಕೊಡಗು ‘ಕೈ’ ಟಿಕೆಟ್ ನೀಡಲಾಗಿದೆ. ತುಮಕೂರಿನಲ್ಲಿ ಆರ್.ರಾಜೇಂದ್ರಗೆ ಕಾಂಗ್ರೆಸ್​ ಟಿಕೆಟ್ ಲಭಿಸಿದೆ. ಮಾಜಿ ಶಾಸಕ‌ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರಗೆ ಟಿಕೆಟ್ ಲಭಿಸಿದೆ. ಬಳ್ಳಾರಿಯಿಂದ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರಾಗಿರುವ ಕೆ.ಸಿ.ಕೊಂಡಯ್ಯಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಆದರೆ ಹಿರಿಯ ನಾಯಕ ಎಸ್‌.ಆರ್‌.ಪಾಟೀಲ ಅವರ ಹೆಸರು ಇಲ್ಲ.

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:

ಕಲಬುರಗಿ- ಶಿವಾನಂದ ಪಾಟೀಲ್ ಮರ್ತೂರು
ಬೆಳಗಾವಿ (ದ್ವಿಸದಸ್ಯ ಸ್ಥಾನ)- ಚನ್ನರಾಜ ಹಟ್ಟಿಹೊಳಿ
ಉತ್ತರ ಕನ್ನಡ- ಭೀಮಣ್ಣ ನಾಯ್ಕ್‌
ಧಾರವಾಡ (ದ್ವಿಸದಸ್ಯ ಸ್ಥಾನ)- ಸಲೀಂ ಅಹ್ಮದ್
ಕೊಪ್ಪಳ, ರಾಯಚೂರು- ಶರಣಗೌಡ ಪಾಟೀಲ್
ಚಿತ್ರದುರ್ಗ- ಬಿ. ಸೋಮಶೇಖರ್‌
ಶಿವಮೊಗ್ಗ- ಪ್ರಸನ್ನ ಕುಮಾರ್
ದಕ್ಷಿಣಕನ್ನಡ- ಉಡುಪಿ (ದ್ವಿಸದಸ್ಯ ಸ್ಥಾನ)- ಮಂಜುನಾಥ ಭಂಡಾರಿ
ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ
ಹಾಸನ- ಎಂ. ಶಂಕರ್​​
ತುಮಕೂರು- ಆರ್​​. ರಾಜೇಂದ್ರ
ಮಂಡ್ಯ- ದಿನೇಶ್ ಗೂಳಿಗೌಡ
ಬೆಂಗಳೂರು ಗ್ರಾಮಾಂತರ- ಎಸ್. ರವಿ
ಕೊಡಗು- ಮಂಥರ್ ಗೌಡ
ವಿಜಯಪುರ- ಬಾಗಲಕೋಟೆ (ದ್ವಿಸದಸ್ಯ ಸ್ಥಾನ)- ಸುನಿಲ್‌ಗೌಡ
ಮೈಸೂರು- ಚಾಮರಾಜನಗರ (ದ್ವಿಸದಸ್ಯ ಸ್ಥಾನ)- ತಿಮ್ಮಯ್ಯ
ಬಳ್ಳಾರಿ- ಕೆ.ಸಿ. ಕೊಂಡಯ್ಯ

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ (ನವೆಂಬರ್‌ ೨೩) ಕೊನೆಯ ದಿನ. ಇಂದು ಅಳೆದುತೂಗಿ ಕಾಂಗ್ರೆಸ್ 17 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮೇಲ್ಮನೆ ವಿಪಕ್ಷ ನಾಯಕರಾಗಿದ್ದ ಎಸ್‍ಆರ್ ಪಾಟೀಲ್‍ಗೆ ವಿಜಯಪುರ-ಬಾಗಲಕೋಟೆ ಅವಳಿ ಕ್ಷೇತ್ರದ ಟಿಕೆಟ್ ಕೈತಪ್ಪಿದೆ. ಇಲ್ಲಿ ಎಂಬಿ ಪಾಟೀಲ್ ಮೇಲುಗೈ ಸಾಧಿಸಿದ್ದಾರೆ. ಸಹೋದರ ಸುನೀಲ್ ಗೌಡ ಪಾಟೀಲ್‍ಗೆ ಟಿಕೆಟ್ ಸಿಕ್ಕಿದೆ.
ಮೈಸೂರಲ್ಲಿ ಧರ್ಮಸೇನಗೆ ಟಿಕೆಟ್ ತಪ್ಪಿದ್ದು, ಡಿ.ಕೆ.ಶಿವಕುಮಾರ ಆಪ್ತ ತಿಮ್ಮಯ್ಯಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಶಿವಕುಮಾರ ಸಂಬಂಧಿ ಎಸ್ ರವಿ ಅವರಿಗೆ ಟಿಕೆಟ್ ನೀಡಲಾಗಿದೆ.
ಬೆಳಗಾವಿಯಲ್ಲಿ ಲಕ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿ ಹೋಳಿಗೆ ಟಿಕೆಟ್ ನೀಡಿದೆ. ಅಚ್ಚರಿ ನಡೆಯಲ್ಲಿ ಹಾಸನದ ಬಿಜೆಪಿ ಮುಖಂಡ ಎ ಮಂಜು ಪುತ್ರ ಮಂಥರ ಗೌಡ ಅವರಿಗೆ ಕಾಂಗ್ರೆಸ್ ಮಡಿಕೇರಿ ಟಿಕೆಟ್ ನೀಡಿದೆ. ಸಚಿವ ಎಸ್.ಟಿ.ಸೋಮಶೇಖರ್ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ದಿನೇಶ್ ಗೂಳಿಗೌಡ ಅವರಿಗೂ ಕಾಂಗ್ರೆಸ್ ಮಣೆ ಹಾಕಿದೆ. ಬಳ್ಳಾರಿಯಲ್ಲಿ ಸ್ಥ ಕೆಸಿ ಕೊಂಡಯ್ಯ ಟಿಕೆಟ್ ಕೊಡಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಮೇಲುಗೈ ಸಾಧಿಸಿದ್ದಾರೆ.

b

ನಿಮ್ಮ ಕಾಮೆಂಟ್ ಬರೆಯಿರಿ

advertisement