ಗಂಡನಿಗೆ ಅಮರತ್ವ ನೀಡಲು ಆತನ ಜೀವಂತ ಸಮಾಧಿ ಮಾಡಿದ ಪತ್ನಿ..!

ಚೆನ್ನೈ: ಸಾವಿನ ನಂತರ ಅಮರತ್ವವನ್ನು ಪಡೆಯಲು ಬಯಸಿದ್ದಕ್ಕಾಗಿ 55 ವರ್ಷದ ಮಹಿಳೆಯೊಬ್ಬರು ಪೆರುಂಬಕ್ಕಂನಲ್ಲಿ ತನ್ನ ಪತಿಯನ್ನು ಜೀವಂತವಾಗಿ ಸಮಾಧಿ ಮಾಡಿದ ಘಟನೆ ನಡೆದಿದೆ.ತನ್ನನ್ನು ಜೀವಂತ ಸಮಾಧಿ ಮಾಡಿ ಪತಿ ಹೇಳಿದ್ದನ್ನು ಅನುಕರಿಸಿದ ಪತ್ನಿ ಜೀವಂತ ಸಮಾಧಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಟೆಕ್ಕಿ ಮಗಳು ತನ್ನ ತಂದೆ ಎಲ್ಲಿದ್ದಾರೆಂಬುದರ ಬಗ್ಗೆ ಈ ಮಹಿಳೆಗೆ ಪದೇ ಪದೇ ಕೇಳಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಮತ್ತು ನಂತರ ಮಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತರನ್ನು ಪೆರುಂಬಕ್ಕಂನ ಕಲೈಂಜರ್ ಕರುಣಾನಿಧಿ ನಗರದ ನಿವಾಸಿ ನಾಗರಾಜ್ (59) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಕೆಲವು ವರ್ಷಗಳ ಹಿಂದೆ, ರಾಜ್ಯದ ದೇವಾಲಯಗಳಿಗೆ ಭೇಟಿ ನೀಡಿದ ನಂತರ, ನಾಗರಾಜ್ ಅವರು ತನ್ನನ್ನು ಅರ್ಚಕ ಎಂದು ಕರೆದುಕೊಳ್ಳಲು ಪ್ರಾರಂಭಿಸಿದ್ದಾರೆ ಮತ್ತು ತಾನು ದೇವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ನಾಗರಾಜ್ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ದೇವಸ್ಥಾನವನ್ನು ನಿರ್ಮಿಸಿದರು ಮತ್ತು ಭವಿಷ್ಯವಾಣಿಯನ್ನು ಹೇಳಲು ಆಗಾಗ್ಗೆ ಜನರನ್ನು ಒಟ್ಟುಗೂಡಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಅವರ ಮಗಳನ್ನು ಉಲ್ಲೇಖಿಸಿ ಹೇಳಿದ್ದಾರೆ. ನವೆಂಬರ್ 16 ರಂದು (ಮಂಗಳವಾರ) ನಾಗರಾಜ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಾನು ಸಾಯುವುದಾಗಿ ಪತ್ನಿಗೆ ತಿಳಿಸಿದ್ದಾರೆ. ದೇವರುಗಳ ವಾಗ್ದಾನದಂತೆ ಅಮರತ್ವವನ್ನು ಪಡೆಯಲು ತನ್ನ ಪತ್ನಿ ಲಕ್ಷ್ಮಿಗೆ ತನ್ನನ್ನು ಜೀವಂತ ಸಮಾಧಿ ಮಾಡುವಂತೆ ಕೇಳಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
ಅನುಮಾನ ಬರದಂತೆ ಲಕ್ಷ್ಮೀ ತನ್ನ ಮನೆಯ ಹಿಂದೆ ನೀರಿನ ತೊಟ್ಟಿಗೆಂದು ಹೇಳಿ ಇಬ್ಬರು ಕೂಲಿ ಕಾರ್ಮಿಕರನ್ನು ಕರೆಸಿಕೊಂಡು ದೊಡ್ಡ ಹೊಂಡವನ್ನು ತೆಗೆಸಿದ್ದಳು. ನವೆಂಬರ್ 17 ರಂದು ಲಕ್ಷ್ಮಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಗರಾಜ್ ಅವರನ್ನು ಹೊಂಡದಲ್ಲಿ ಹೂತು ಹಾಕಿದ್ದರು.
ಶುಕ್ರವಾರ, ಶೋಲಿಂಗನಲ್ಲೂರಿನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅವರ ಮಗಳು ತಮಿಳರಸಿ ಮನೆಗೆ ಹಿಂದಿರುಗಿದಾಗ ತನ್ನ ತಂದೆ ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಳು. ತಡರಾತ್ರಿಯ ವರೆಗೂ ತಮಿಳರಸಿಯ ಪ್ರಶ್ನೆಗಳಿಗೆ ಉತ್ತರಿಸದೆ ಲಕ್ಷ್ಮಿ ತಪ್ಪಿಸಿಕೊಂಡಿದ್ದಳು ಆದರೆ ಪದೇಪದೇ ಒತ್ತಾಯಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.
ಪೆರುಂಬಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರ್‌ಡಿಒ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಾಗರಾಜ್ ಅವರನ್ನು ಜೀವಂತ ಸಮಾಧಿ ಮಾಡಲಾಗಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ಫಲಿತಾಂಶದಿಂದ ತಿಳಿದುಬರಲಿದೆ ಎಂದು ಪೊಲೀಸರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ