ವೈರಲ್ ವಿಡಿಯೋ: ವಾರಾಣಸಿ ಘಾಟ್‌ನಲ್ಲಿ ಭಿಕ್ಷೆ ಬೇಡುವ ನಿರರ್ಗಳ ಇಂಗ್ಲಿಷ್ ಮಾತಾಡುವ ಮಹಿಳೆ, ಈಕೆ ಕಂಪ್ಯೂಟರ್ ಪದವಿಧರೆ…ಕತೆ ಕೇಳಿದ್ರೆ ಮನಕಲಕುತ್ತದೆ

ವಾರಾಣಸಿ: ವಾರಾಣಸಿಯ ಘಾಟ್‌ಗಳ ಮೇಲೆ ವಾಸಿಸುವ ಮಹಿಳೆಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಸ್ವಾತಿ ಎಂದು ಗುರುತಿಸಲಾದ ಮಹಿಳೆ ವಾರಣಾಸಿಯ ಅಸ್ಸಿ ಘಾಟ್‌ನಲ್ಲಿ ಭಿಕ್ಷೆ ಬೇಡುತ್ತಿದ್ದಳು.
ಈ ವಿಡಿಯೋವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ವಿದ್ಯಾರ್ಥಿನಿ ಶಾರದಾ ಅವನೀಶ್ ತ್ರಿಪಾಠಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ಲಿಪ್‌ನಲ್ಲಿ ಸ್ವಾತಿ ತಾನು ದಕ್ಷಿಣ ಭಾರತದವಳು ಎಂದು ಹೇಳಿದ್ದಾಳೆ. ತನ್ನ ಮಗುವಿಗೆ ಜನ್ಮ ನೀಡಿದ ನಂತರ ತನ್ನ ದೇಹದ ಬಲಭಾಗವು ಪಾರ್ಶ್ವವಾಯುವಿಗೆ ಒಳಗಾಯಿತು ಎಂದು ಅವರು ಹೇಳುತ್ತಾರೆ. ಮೂರು ವರ್ಷಗಳಿಂದ ವಾರಣಾಸಿಯ ಘಾಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ತನಗೆ ಉದ್ಯೋಗ ಪಡೆಯಲು ಸಹಾಯ ಮಾಡುವಂತೆ ಜನರನ್ನು ಒತ್ತಾಯಿಸಿದ್ದಾಳೆ.

“ಅಸ್ಸಿ ಘಾಟ್‌ನಲ್ಲಿ ವಾಸವಾಗಿರುವ ಮಹಿಳೆ ಸ್ವಾತಿ ಕಂಪ್ಯೂಟರ್‌ ಸೈನ್ಸ್‌ ಪದವೀಧರೆ. ಮಗುವಿಗೆ ಜನ್ಮ ನೀಡಿದ ನಂತರ ದೇಹದ ಬಲಭಾಗ ನಿಷ್ಕ್ರಿಯಗೊಂಡಿದೆ. ಮೂರು ವರ್ಷಗಳ ಹಿಂದೆ ವಾರಾಣಸಿಗೆ ಬಂದು ಅಂದಿನಿಂದ ಇಲ್ಲೇ ಇದ್ದಾಳೆ. ಪುನರ್ವಸತಿ ಬೇಡ, ಆದರೆ ಆರ್ಥಿಕ ಸ್ವಾತಂತ್ರ್ಯ ಬೇಕು, ಅವಳು ಯಾರಿಂದಲೂ ಹಣವನ್ನು ಬಯಸುವುದಿಲ್ಲ, ಆದರೆ ಉದ್ಯೋಗವನ್ನು ಬಯಸುತ್ತಾಳೆ. ತಾನು ಟೈಪಿಂಗ್ ಮತ್ತು ಇತರ ಕಂಪ್ಯೂಟರ್-ಸಂಬಂಧಿತ ಕೆಲಸಗಳನ್ನು ಮಾಡಬಹುದು ಎಂದು ಸ್ವಾತಿ ಹೇಳುತ್ತಾಳೆ. ಅವಳು ಇಂಗ್ಲಿಷಿಲ್ಲಿ ನಿರರ್ಗಳವಾಗಿ ಮಾತನಾಡುತ್ತಾಳೆ. ಅತ್ಯಂತ ನಯವಾಗಿ ಮಾತನಾಡುತ್ತಾಳೆ. ಉತ್ತಮ ನಡವಳಿಕೆಯನ್ನು ಹೊಂದಿದ್ದಾಳೆ. ಸ್ವಾತಿ ಉತ್ತಮ ಜೀವನಕ್ಕೆ ಅರ್ಹಳು, ದಯವಿಟ್ಟು ಸಹಾಯ ಮಾಡಲು ಪ್ರಯತ್ನಿಸಿ ಅವಳು,” ಎಂದು ತ್ರಿಪಾಠಿ ವಿಡಿಯೊದ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 58,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಆಕೆಗೆ ಕೆಲಸ ಕೊಡಿಸಲು ಯಾರಾದರೂ ಸಹಾಯ ಮಾಡುತ್ತಾರೆ ಎಂಬ ಭರವಸೆಯೊಂದಿಗೆ ಹಲವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement