ಹೊನ್ನಾವರ : ತಾಲೂಕಿನ ಮುಗ್ವಾ ಹಳಗೇರಿ ಮೂಲದ ಸದ್ಯ ಅನಂತವಾಡಿ ಕೋಟಾದಲ್ಲಿ ವಾಸವಿದ್ದ, ನಗರದ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬ ಅನಂತವಾಡಿ ಸಮೀಪ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ.
ವಿದ್ಯಾರ್ಥಿಯನ್ನು ವಿಶಾಲ ಗೌಡ ಎಂದು ಗುರುತಿಸಲಾಗಿದೆ. ರೈಲಿನ ಗಾಲಿಗೆ ಸಿಕ್ಕು ದೇಹ ಛಿದ್ರವಾಗಿ ಬಿದ್ದಿದೆ ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ. ಕೃಷಿಕರಾಗಿರುವ ತಂದೆ ತಾಯಿಗೆ ಈತ ಕಿರಿಯ ಮಗ ಎಂದು ಹೇಳಲಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಈತ ಪ್ರಥಮ ಪಿಯುಸಿಗೆ ಹೊನ್ನಾವರ ಕಾಲೇಜಿಗೆ ಸೇರಿದ ನಂತರ ಅನಂತವಾಡಿ ಕೋಟಾದಿಂದ ಕಾಲೇಜಿಗೆ ಬರುತ್ತಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನೆ ಸ್ಥಳಕ್ಕೆ ಮಂಕಿ ಪೋಲೀಸರು ದೌಡಾಯಿಸಿ ಸಾರ್ವಜನಿಕರ ಸಹಕಾರದಿಂದ ಶವವನ್ನು ಸ್ಥಳಾಂತರಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ