ಎಮ್ಮೆ ಅಂದ್ರೆ ದಡ್ಡ ಎನ್ನುವವರು ಈ ವಿಡಿಯೊದಲ್ಲಿ ಬೋರ್‌ ವೆಲ್‌ ನೀರು ಕುಡಿಯಲು ಎಮ್ಮೆಯ ಮಾಡಿದ ಬುದ್ಧಿವಂತಿಕೆ ನೋಡಿ..!

ನವದೆಹಲಿ: ಸಾಮಾನ್ಯವಾಗಿ ಮಕ್ಕಳಿಗೆ ಏನಾದರೂ ಬಾರದೇ ಇದ್ದರೆ ‘ಎಮ್ಮೆ ಕಾಯಲು ಹೋಗು’ಎಂದು ಮನೆಯಲ್ಲಿ ಬೈಯುತ್ತಾರೆ. ಅಥವಾ ಎಮ್ಮೆ ತರಹ ಸೋಮಾರಿ ಎಂದು ಬೈಯುವುದು ಸಾಮಾನ್ಯ. ಆದರೆ ಎಮ್ಮೆ ಕೂಡ ಬುದ್ಧಿವಂತ ಎನ್ನುವುದು ವಿಡಿಯೊ ನೋಡಿದರಿಗೆಲ್ಲ ಅನ್ನಿಸುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎಮ್ಮೆಯ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಎಮ್ಮೆ ತಾನೇ ಹ್ಯಾಂಡ್ ಪಂಪ್ ಬಳಸಿ ಬೋರ್‌ವೆಲ್‌ ನೀರು ಕುಡಿಯುವುದನ್ನು ನೋಡಬಹುದು.
ಈ ವೈರಲ್ ವಿಡಿಯೋದಲ್ಲಿ ಎಮ್ಮೆಗಳ ಹಿಂಡು ಕಾಣುತ್ತದೆ. ಒಂದು ಎಮ್ಮೆ ಹ್ಯಾಂಡ್‌ ಬೋರ್‌ವೆಲ್‌ ಬಳಿ ನಿಂತಿರುವುದನ್ನು ಕಾಣಬಹುದು. ಆ ಎಮ್ಮೆಯ ಪಕ್ಕದಲ್ಲಿ ಪುಟ್ಟ ಕಟ್ಟೆ ಕೂಡ ಇದೆ.
ಎಎಮ್ಮೆಗೆ ಬಾಯಾರಿಕೆಯಾಗಿದ್ದು, ತನ್ನ ಕೊಂಬುಗಳನ್ನು ಬಳಸಿ ಹ್ಯಾಂಡ್‌ ಬೋರ್‌ವೆಲ್‌ನಿಂದ ನೀರು ಬರುವಂತೆ ಮಾಡುತ್ತದೆ.. ಎಮ್ಮೆ ಕೈ ಪಂಪ್ ಅನ್ನು ಕೊಂಬಿನಿಂದ ಮೇಲಕ್ಕೆ ಕೆಳಕ್ಕೆ ಮಾಡುತ್ತದೆ. ನೀರು ಹೊರಬಂದ ಕೂಡಲೆ ನೀರನ್ನು ಕುಡಿದು ತನ್ನ ಬಾಯಾರಿಕೆ ನೀಗಿಸಿಕೊಳ್ಳುತ್ತದೆ. ಇದನ್ನು ಸ್ಥಳೀಯ ನಿವಾಸಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಪ್ರಾಣಿಗಳು ತಮ್ಮನ್ನು ಸಾಕಿದವರನ್ನುಅನುಕರಿಸುತ್ತವೆ ಎಂಬುದಕ್ಕೆ ಈ ವಿಡಿಯೊದಲ್ಲಿರುವ ಎಮ್ಮೆಯೇ ನಿದರ್ಶನ. ಆದರೆ ಈ ವಿಡಿಯೋ ಎಲ್ಲಿಯದು ಎಂಬದು ಗೊತ್ತಿಲ್ಲ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ