ಎಸಿಬಿ ದಾಳಿ ವೇಳೆ ಬಾತ್‌ ರೂಂ ಪೈಪ್‌-ನೀರಿನ ಪೈಪ್‌ನಿಂದ ಉದುರಿದ ನೋಟಿನ ಕಂತೆಗಳು..!

posted in: ರಾಜ್ಯ | 0

ಕಲಬುರಗಿ: ಇಲ್ಲಿ ಬುಧವಾರ ನಡೆದ ಎಸಿಬಿ ದಾಳಿ ವೇಳೆ ನೀರಿನ ಪೈಪಿನಲ್ಲಿ ಕಂತೆ ಕಂತೆ ನೋಟುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಪಿಡಬ್ಲೂಡಿ ಇಲಾಖೆಯ ಶಾಂತಗೌಡ ಅವರ ಮನೆಯ ಬಾತ್ ರೂಂ ಮತ್ತು ವಾಶ್ ಬೇಸಿನ್ ಪೈಪ್​ನಲ್ಲಿ ದುಡ್ಡಿನ ಕಂತೆ ಅಡಗಿಸಿಟ್ಟಿರುವುದು ಎಸಿಬಿ ಅಧಿಕಾರಿಗಳ ದಾಳಿ ವೇಳೆ ಬೆಳಕಿಗೆ ಬಂದಿದೆ. ಕಲಬುರಗಿ ಜಿಲ್ಲೆಯ ಗುಬ್ಬಿ ಕಾಲೋನಿಯಲ್ಲಿರುವ ಮನೆಯ ಪೈಪ್​ನಲ್ಲಿ ಹಣ ಪತ್ತೆಯಾಗಿದೆ.
ಅಲ್ಲದೆ ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳು, ಜೆ.ಇ. ಶಾಂತಗೌಡ ಬಿರಾದಾರ್‌ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಎಸಿಬಿ ದಾಳಿ ನಡೆದಾಗ ಹಣವನ್ನು ಪೈಪ್ ನಲ್ಲಿ ತುಂಬಿರುವ ಶಂಕೆ ವ್ಯಕ್ತವಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ರಾಜ್ಯದ 68 ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಭಾರಿ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಹಿನ್ನಲೆಯಲ್ಲಿ 408 ಎಸಿಬಿ ಅಧಿಕಾರಿಗಳು ರಾಜ್ಯದಾಧ್ಯಂತ ಏಕ ಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ