ಮಲ್ಪೆ: ಒಂದೇ ಮೀನು ಬರೋಬ್ಬರಿ 1.80 ಲಕ್ಷ ರೂ.ಗಳಿಗೆ ಮಾರಾಟವಾಯ್ತು…!

posted in: ರಾಜ್ಯ | 0

ಉಡುಪಿ : ಕರಾವಳಿ ಮೀನುಗಾರರಿಗೆ ಮತ್ಸ್ಯಕ್ಷಾಮ ಎದುರಾಗಿದೆ. ಆದರೆ ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಒಂದೇ ಮೀನಿನಲ್ಲಿ ಬಂಪರ್‌ ಲಾಭ ಪಡೆದಿದ್ದಾರೆ. ಮೀನುಗಾರರು ಹಿಡಿದು ತಂದ ಅಪರೂಪದ ಗೋಳಿ ಮೀನು ಬರೋಬ್ಬರಿ 1.80 ಲಕ್ಷ ರೂ.ಗಳಿಗೆ ಮಾರಾಟವಾಗಿದೆ…!
ಉಡುಪಿ ಜಿಲ್ಲೆಯ ಮಲ್ಪೆಯ ತೊಟ್ಟಂನ ಶಾನ್‌ ರಾಜ್‌ ಎಂಬವರಿಗೆ ಸೇರಿದ ಬಲರಾಮ್‌ ಬೋಟಿನಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಅವರಿಗೆ ಅಪರೂಪ ಮೀನು ದೊರೆತಿತ್ತು. ನಂತರ ಅದನ್ನು ಮಲ್ಪೆ ಬಂದರಿನಲ್ಲಿ ಹರಾಜು ಹಾಕಿದ್ದಾರೆ. ಈ ವೇಳೆಯಲ್ಲಿ ಅವರು ಹಿಡಿದು ತಂದಿದ್ದ ಗೋಳಿ ಮೀನು ಬರೋಬ್ಬರಿ 1.80 ಲಕ್ಷ ರೂ.ಗಳಿಗೆ ಮಾರಾಟವಾಗಿದೆ. ಇದಕ್ಕೆ ಫೋಲ್ ಫಿಶ್ ಎಂದೂ ಕರೆಯುತ್ತಾರೆ.
20 ಕೆಜಿ ತೂಕವಿದ್ದ ಗೋಳಿ ಮೀನು ಪ್ರತಿ ಕೆಜಿಗೆ 9060 ರೂ. ಗಳಂತೆ ಮಾರಾಟವಾಗಿದೆ. ಮಲ್ಪೆ ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಹರಾಜಾಗುತ್ತಿವೆ. ಆದರೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಒಂದು ಮೀನು ಹರಾಜು ಆಗಿರೋದು ಇದೇ ಮೊದಲು ಎನ್ನುತ್ತಾರೆ ಮೀನುಗಾರರು. ಗೋಳಿ ಮೀನು ಅಪರೂಪದ ಮೀನು ಹಾಗೂ ಇದನ್ನು ಹೆಚ್ಚಾಗಿ ಔಷಧ ತಯಾರಿಕೆಗೆ ಬಳಸುತ್ತಾರೆ. ಮಧುಮೇಹ, ಅಸ್ತಮಾ ಕಾಯಿಲೆಗಳಿಗೆ ಹೆಚ್ಚು ಬಳಕೆಯಾಗುತ್ತದೆ. ಹೀಗಾಗಿಯೇ ಈ ಮೀನಿಗೆ ಮಾರುಕಟ್ಟೆಯಲ್ಲಿ ಅಷ್ಟು ಬೆಲೆ ಬಂದಿದೆ ಎಂದು ಮೀನುಗಾರರು ಹೇಳುತ್ತಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ