ಹೆಚ್ ಡಿ ರೇವಣ್ಣ ಮಗ ಡಾ. ಸೂರಜ್ ಆಸ್ತಿ 65 ಕೋಟಿ ರೂ.

posted in: ರಾಜ್ಯ | 0

ಹಾಸನ: ವೃತ್ತಿಯಲ್ಲಿ ವೈದ್ಯರಾಗಿರುವ ಸೂರಜ್ ನಾಮಪತ್ರದೊಂದಿಗೆ ಅವರು ಸಲ್ಲಿಸಿರುವ ಆಸ್ತಿ ಕುರಿತ ಅಫಿಡವಿಟ್ ಪ್ರಕಾರ ಅವರು ತಮ್ಮ 33ನೇ ವಯಸ್ಸಿಗೆ ಸುಮಾರು 65 ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿಗೆ ಒಡೆಯರಾಗಿದ್ದಾರೆ.
ಅವರ ಹೆಸರಲ್ಲಿ 3.53 ಕೋಟಿ ರೂ. ಚರಾಸ್ತಿ ಮತ್ತು ರೂ. 61.68 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಡಾ. ಸೂರಜ್ ತಮ್ಮ ತಾತ-ಅಜ್ಜಿ, ಅತ್ತೆಯಂದಿರು, ಹಾಗೂ ತಂದೆ-ತಾಯಿಗಳಿಂದ ಸುಮಾರು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಅವರಲ್ಲಿ ಸುಮಾರು 46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 18 ಕೆಜಿ ಬೆಳ್ಳಿಯಿದೆ.
2015ರಲ್ಲಿ ಜನರಲ್ ಸರ್ಜರಿಯಲ್ಲಿ ಎಮ್ಎಸ್ ವ್ಯಾಸಂಗವನ್ನು ಪೂರ್ತಿಗೊಳಿಸಿದ ಡಾ ಸೂರಜ್ 36 ಆಕಳು ಮತ್ತು 8 ದನಗಳನ್ನು ಸಹ ಹೊಂದಿದ್ದಾರೆ.
ತಮ್ಮ ಪತ್ನಿಯ ಹೆಸರಲ್ಲಿರುವ ಆಸ್ತಿಯನ್ನು ಸೂರಜ್ ಬಹಿರಂಗಪಡಿಸಿಲ್ಲ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ