ಹೈದರಾಬಾದ್ ಮೃಗಾಲಯದಲ್ಲಿ ನಿಷೇಧಿತ ಪ್ರದೇಶದಲ್ಲಿ ಪ್ರವೇಶ: ಸಿಂಹದ ಅಪಾಯದಿಂದ ಪಾರು ಮಾಡಿದ ಸಿಬ್ಬಂದಿ| ವೀಕ್ಷಿಸಿ

ಹೈದರಾಬಾದ್‌: ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿರುವ ಆಫ್ರಿಕನ್ ಸಿಂಹ ಇರುವ ಕಂದಕ ಪ್ರದೇಶದಲ್ಲಿ ಅಲೆದಾಡುತ್ತಿದ್ದ 31 ವರ್ಷದ ವ್ಯಕ್ತಿಯನ್ನು ಮಂಗಳವಾರ ಮಧ್ಯಾಹ್ನ ಸಿಬ್ಬಂದಿ ರಕ್ಷಿಸಿದ್ದಾರೆ.
ನಂತರ ಮೃಗಾಲಯದ ಅಧಿಕಾರಿಗಳು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ವ್ಯಕ್ತಿಯನ್ನು ಜಿ. ಸಾಯಿ ಕುಮಾರ್ ಎಂದು ಗುರುತಿಸಲಾಗಿದೆ.
ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವ್ಯಕ್ತಿ ಅಪಾಯ ವಲಯದಲ್ಲಿರುವ ಬಂಡೆಯ ಮೇಲೆ ಬಾಗಿ ಕುಳಿತಿದ್ದಾನೆ. ಸಿಂಹ ಅವನತ್ತ ಗುರಾಯಿಸಿಕೊಂಡು ನೋಡುತ್ತಿರುವುದನ್ನು ಹಾಗೂ ಒಂದುಹಂತದಲ್ಲಿ ಅವನತ್ತ ಜಿಗಿಯಲು ಪ್ರಯತ್ನಿಸುರುವುದನ್ನು ವಿಡಿಯೊ ತೋರಿಸುತ್ತದೆ. ಜನರು ಅವನಿಗೆ ಎಚ್ಚರಿಸಲು ಹಾಗೂ ಸಹಾಯಕ್ಕಾಗಿ ಕೂಗುವುದನ್ನು ಸಹ ಕೇಳಬಹುದು.
ನೆಹರು ಝೂಲಾಜಿಕಲ್ ಪಾರ್ಕ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಜಿ ಸಾಯಿಕುಮಾರ್ ಅವರು ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸಿಂಹದ ಆವರಣದೊಳಗೆ ಜಿಗಿದಿದ್ದಾರೆ ಮತ್ತು ಬಂಡೆಗಳ ಮೇಲೆ ನಡೆಯುತ್ತಿದ್ದರು ಎಂದು ಹೇಳಿದೆ.

ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಸಂಪೂರ್ಣವಾಗಿ ನಿಷೇಧಿತ ಪ್ರದೇಶವಾಗಿರುವ ಆವರಣದಲ್ಲಿ ಸಿಂಹಗಳನ್ನು ಬಿಡಲಾಗುತ್ತದೆ. ಅಲ್ಲಿಗೆ ಈ ವ್ಯಕ್ತಿ ಹೋಗಿದ್ದಾನೆ. ವ್ಯಕ್ತಿಯನ್ನು ರಕ್ಷಿಸಿ ಮೃಗಾಲಯದ ಸಿಬ್ಬಂದಿ ಹಿಡಿದು ಬಹದ್ದೂರ್‌ಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ