ತಪ್ಪಾಗಿದೆ, ಯಾವುದೇ ಧರ್ಮ, ಸಮಾಜ ಜಾತಿ ನಿಂದಿಸುವ ಉದ್ದೇಶ ನನ್ನದಲ್ಲ: ಹಂಸಲೇಖ

ಬೆಂಗಳೂರು: ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವುದೇ ಧರ್ಮ, ಸಮಾಜ ನಿಂದಿಸುವ ಉದ್ದೇಶ ನನ್ನದಲ್ಲ. ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ ಎಂದು ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರವಾದ ರೀತಿಯಲ್ಲಿ ಮಾತನಾಡಿದ್ದ ಹಂಸಲೇಖ ಬಸವನಗುಡಿ ಠಾಣೆಗೆ ಹಾಜರಾಗಿ ಹೇಳಿದ್ದಾರೆ.
ಎರಡು ಬಾರಿ ಬಾರಿ ನೋಟಿಸ್ ಕೊಟ್ಟ ನಂತರ ಗುರುವಾರ ತಮ್ಮ ವಕೀಲ ದ್ವಾರಕನಾಥ ಅವರೊಂದಿಗೆ ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾದ ಹಂಸಲೇಖ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನನ್ನ ಮಾತುಗಳು ಇಷ್ಟೊಂದು ದೊಡ್ಡ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಭಾವಿಸಿರಲಿಲ್ಲ. ಯಾಕೆ ಹಾಗೆ ಹೇಳಿದೆನೋ ನನಗೆ ಗೊತ್ತಾಗುತ್ತಿಲ್ಲ. ಯಾವುದೇ ಉದ್ದೇಶ ಹಾಗೂ ಇನ್ನೊಬ್ಬರಿಗೆ ನೋವು ಕೊಡಬೇಕೆಂದು ಹೇಳಿದ್ದಲ್ಲ. ಮಾತನಾಡುವ ಓಘದಲ್ಲಿ ಹಾಗೆ ಹೇಳಿಬಿಟ್ಟಿದ್ದೇನೆ. ನಾನು ಹೇಳಿದ್ದಕ್ಕೆ ನನ್ನ ಹೆಂಡತಿಯೇ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವುದೇ ಧರ್ಮ, ಸಮಾಜ ಜಾತಿಯನ್ನ ನಿಂದಿಸುವ ಉದ್ದೇಶ ನನ್ನದಲ್ಲ. ಈ ಘಟನೆಯಿಂದ ತನಗೆ ತುಂಬಾ ನೋವಾಗಿದೆ. ನ್ನಿಂದ ತಪ್ಪಾಗಿದೆ ಎಂದು ತನಿಖಾ ಅಧಿಕಾರಿ ಮುಂದೆ ಅವರು ಗದ್ಗದಿತರಾದರು ಎಂದು ವರದಿಗಳು ತಿಳಿಸಿವೆ.
ಅಗತ್ಯ ಬಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಪೊಲೀಸರು ಹೇಳಿದ್ದಾರೆ.
ಹಂಸಲೇಖ ಠಾಣೆಗೆ ಹಾಜರಾಗುತ್ತಿದ್ದಂತೆ ಸ್ಥಳದಲ್ಲಿ ಹಂಸಲೇಖ ಪರ-ವಿರುದ್ಧ ಪ್ರತಿಭಟನೆ ನಡೆಯಿತು. ಹಿಂದೂಪರ ಸಂಘಟನೆಗಳು, ಭಜರಂಗದಳ ಕಾರ್ಯಕರ್ತರು ಹಂಸಲೇಖ ಕ್ಷಮೆಗೆ ಪಟ್ಟುಹಿಡಿದರು. ಹಂಸಲೇಖ ಪರ ನಟ ಚೇತನ್, ಬೆಂಬಲಿಗರು ಕೂಡ ಪ್ರತಿ ಘೋಷಣೆ ಕೂಗಿದರು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟರು

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement