ತಮ್ಮ ಅನಾರೋಗ್ಯದ ವದಂತಿಗಳಿಗೆ ಪತ್ರದ ಮುಖೇನ ಉತ್ತರಕೊಟ್ಟ ಹಂಸಲೇಖ

posted in: ರಾಜ್ಯ | 0

ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿ, ಅನೇಕರ ಆಕ್ರೋಶಕ್ಕೆ ಕಾರಣವಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ ಆರೋಗ್ಯದ ಬಗ್ಗೆ ವದಂತಿಗಳು ಹರಿದಾಡಲು ಆರಂಭಿಸಿದ್ದಕ್ಕೆ ಹಂಸಲೇಖ ತೆರೆ ಎಳೆದಿದ್ದಾರೆ.
ವರದಂತಿಗಳಿಗೆ ಹಂಸಲೇಖ ಪತ್ರ ಬರೆದು ಉತ್ತರ ನೀಡಿದ್ದಾರೆ. ಇತ್ತೀಚಿಗೆ ಸನ್ಮಾನ ಸಮಾರಂಭವೊಂದರಲ್ಲಿ ಹಂಸಲೇಖ ಆಡಿದ ಮಾತು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಮಾತಿನ ಭರದಲ್ಲಿ ಹಂಸಲೇಖ ಪೇಜಾವರ ಶ್ರೀಗಳ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಆದರೆ ತಕ್ಷಣವೇ ಹಂಸಲೇಖ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದರು. ಆದರೂ ಬೆಂಗಳೂರಿನ ಬಸವನಗುಡಿ, ಹನುಮಂತನಗರ ಹಾಗೂ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಂಸಲೇಖ ವಿರುದ್ಧ ದೂರು ದಾಖಲಾಗಿತ್ತು. ಹಾಗೂ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಹಂಸಲೇಖ ಅವರಿಗೆ ನೊಟೀಸ್ ಕೂಡ ಜಾರಿ ಮಾಡಿದ್ದರು. ಈ ವೇಳೆ ಅನಾರೋಗ್ಯದ ಕಾರಣ ನೀಡಿದ್ದ ಹಂಸಲೇಖ ನವೆಂಬರ್ 25 ರಂದು ಹಾಜರಾಗುವುದಾಗಿ ಕಾಲಾವಕಾಶ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಹಂಸಲೇಖ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹರಡಲಾರಂಭಿಸಿದ್ದವು. ಈ ಬೆಳವಣಿಗೆಯಿಂದ ಬೇಸತ್ತ ಹಂಸಲೇಖ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದಿರುವ ಹಂಸಲೇಖ, ತಾನು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ನನ್ನ ಆರೋಗ್ಯ ಹದಗೆಟ್ಟಿದೆ ಎಂದು ರಾಜ್ಯಾದಂತ ಸುದ್ದಿ ಹರಡಿದೆ. ಎಲ್ಲೆಡೆಯಿಂದ ದೂರವಾಣಿ ಕರೆ ಬಂದಿದೆ. ಇದರಿಂದ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು ನನಗೆ ಅರಿವಾಗಿದೆ.
ನಾಣು ಕೇಳದಿದ್ದರೂ ಸರ್ಕಾರ ನನಗೆ ಭದ್ರತೆ ಕೊಟ್ಟಿದೆ ಎಂದು ಹೇಳಿರುವ ಹಂಸಲೇಖ, ಅಭಿಮಾನ ಆವೇಶವಾಗಬಾರದು. ಆವೇಶ ಅವಘಡಗಳಿಗೆ ಕಾರಣವಾಗಬಾರದು. ಅಭಿಮಾನ ಹಾಡಿನಂತೆ ಇರಬೇಕು. ಹಾಡು ಕೇಳಿಸುತ್ತದೆ, ಮುಟ್ಟಿಸುತ್ತದೆ ನಿಮ್ಮ ಪ್ರೀತಿಗೆ ನನಗೆ ಮುಟ್ಟಿದೆ. ಹೃದಯ ತುಂಬಿದ ಧನ್ಯವಾದ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ