ವಿದೇಶಿಗನ ಡ್ಯಾನ್ಸಿಗೆ ಸಖತ್ ಸ್ಟೆಪ್ ಹಾಕಿದ ಅಜ್ಜ: ವಿಡಿಯೋ ವೈರಲ್

ನವದೆಹಲಿ: ಇಲ್ಲೊಬ್ಬ ವಯೋವೃದ್ಧ ವಿದೇಶಿಗನ ಜೊತೆ ಡ್ಯಾನ್ಸಿಗೆ ಸ್ಟೆಪ್ ಹಾಕಿದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವಿಡಿಯೊದಲ್ಲಿ ವಿದೇಶಿಗನೊಬ್ಬನು ಬಾಲಿವುಡ್ ಹಾಡಿಗೆ ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದು, ಇದರಿಂದ ಪ್ರೇರಣೆಗೊಂಡ ಅಜ್ಜ ಆತನ ಜೊತೆ ಸಖತ್ ಸ್ಟೆಪ್ ಹಾಕಿದ್ದಾನೆ. ಜನರು ಇವರ ಡ್ಯಾನ್ಸ್ ನೋಡಿ ಸಖತ್‌ ಮಜಾ ಅನುಭವಿಸುತ್ತಿದ್ದಾರೆ. ವಿದೇಶಿಗ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ‘ಓ ಓ ಜಾನೇ ಜಾನಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಕೊನೆಯಲ್ಲಿ ಇಬ್ಬರು ಕೈಯನ್ನು ಕುಲುಕುತ್ತಾರೆ. ವಿದೇಶಿಗನ ಸ್ಟೆಪ್ ಲೆಕ್ಕಿಸದೆ, ಅಜ್ಜ ತನಗೆ ತೋಚಿದ ರೀತಿಯಲ್ಲಿ ಕುಣದಿಉ ಕುಪ್ಪಳಿಸಿದ್ದಾನೆ.
ಟ್ವಿಟ್ಟರ್ ನಲ್ಲಿ ಸುಧೀರ್ದಂಡೋಟಿಯ ಎಂಬವರು ಈ ವಿಡಿಯೋ ಹಂಚಿಕೊಂಡಿದ್ದು, ಸ್ವದೇಶಿ ಶೈಲಿಯ ಮುಂದೆ ವಿದೇಶಿಯರೂ ಮಂಕಾಗುತ್ತಾರೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ‘ದಾದಾಜಿ’, ‘ ಯೇ ಹಮಾರೆ ದಾದಾಜಿ ಹೇ ಭಾರತೀಯ ದಾದಾಜಿ ಎಂದೆಲ್ಲ ಕಮೆಂಟ್ ಮಾಡಿದ್ದಾರೆ.

.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ