ಇಂಗ್ಲಿಷ್ ಕಾಲುವೆ ದಾಟುವಾಗ ದುರಂತ: ಬೋಟ್ ಮಗುಚಿ 31 ವಲಸಿಗರು ಸಾವು

ಪ್ಯಾರಿಸ್: ಅಪಾಯಕಾರಿ ಇಂಗ್ಲಿಷ್‌ ಕಾಲುವೆಯಲ್ಲಿ ವಲಸಿಗರ ಬೋಟ್ ಮಗುಚಿದ ಪರಿಣಾಮ ಸುಮಾರು 31ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬ್ರಿಟನ್‌ಗೆ ತೆರಳುತ್ತಿದ್ದ ಬೋಟ್ ನಲ್ಲಿ 34 ಮಂದಿ ಇದ್ದರು ಎಂದು ನಂಬಲಾಗಿದೆ. ಇದು ಅತ್ಯಂತ ದೊಡ್ಡ ವಲಸಿಗರ ದುರಂತ ಎಂದು ಫ್ರಾನ್ಸ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ಅಧಿಕಾರಿಗಳು 31 ಶವಗಳನ್ನು ಹೊರತೆಗೆದಿದ್ದಾರೆ. ಇಬ್ಬರನ್ನು ರಕ್ಷಿಸಿದ್ದು, ಮತ್ತೊಬ್ಬ ಿನ್ನೂ ಪತ್ತೆಯಾಗಿಲ್ಲ. ಇವರು ಯಾವ ದೇಶದವರೆಂಬುದು ತಿಳಿದುಬಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಇಂಗ್ಲಿಷ್ ಕಾಲುವೆ ಅಟ್ಲಾಂಟಿಕ್ ಮಹಾಸಾಗರದ ಒಂದು ಭಾಗವಾಗಿದ್ದು, ಇದು ದಕ್ಷಿಣ ಇಂಗ್ಲೆಂಡನ್ನು ಉತ್ತರ ಫ್ರಾನ್ಸ್‌ನಿಂದ ಪ್ರತ್ಯೇಕಿಸುತ್ತದೆ. ಇದು ವಿಶ್ವದ ಅತೀ ಹೆಚ್ಚು ಹಡಗುಗಳು ಪಯಣಿಸುವ ಪ್ರದೇಶವಾಗಿದೆ.
ಅಫ್ಘಾನಿಸ್ತಾನ, ಸುಡಾನ್, ಇರಾಕ್, ಎರಿಟ್ರಿಯಾಗಳಂತಹ ದೇಶಗಳಲ್ಲಿ ಹೆಚ್ಚಿದ ಆಂತರಿಕ ಕಲಹ ಹಾಗೂ ಬಡತನದಿಂದಾಗಿ ಜನರು ಬ್ರಿಟನ್‌ನಲ್ಲಿ ಉತ್ತಮ ಜೀವನ ಪಡೆಯಲು ಅಪಾಯಕಾರಿ ಕಾಲುವೆಗಳ ಮೂಲಕ ಪ್ರಯಾಣಿಸುತ್ತಿದ್ದಾರೆ. ಗುಣಮಟ್ಟದ ಬೋಟ್‌ಗಳಲ್ಲಿ ಕಡಿದಾದ ಇಂಗ್ಲಿಷ್ ಕಾಲುವೆ ದಾಟುವುದು ಅತ್ಯಂತ ಅಪಾಯಕಾರಿಯಾಗಿದ್ದರೂ ಹಲವರು ಜೀವ ಪಣಕ್ಕಿಟ್ಟು ಪ್ರಯಾಣಿಸುತ್ತಾರೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement