ಖ್ಯಾತ ವಿದ್ವಾಂಸ-ಲೇಖಕ ಪ್ರೊ.ಕೆ.ಎಸ್. ನಾರಾಯಣಾಚಾರ್ಯ ಇನ್ನಿಲ್ಲ

posted in: ರಾಜ್ಯ | 2

ಬೆಂಗಳೂರು: ಖ್ಯಾತ ಲೇಖಕ ಹಾಗೂ ಹಿರಿಯ ವಿದ್ವಾಂಸ ಪ್ರೊ.ಕೆ.ಎಸ್. ನಾರಾಯಣಾಚಾರ್ಯ (88) ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ತಮ್ಮ ಬೆಂಗಳೂರಿನ ನಿವಾಸದಲ್ಲಿ ಪ್ರೊ.ಕೆ.ಎಸ್. ನಾರಾಯಣಾಚಾರ್ಯ ಅವರು ಕೊನೆಯುಸಿರೆಳೆದಿದ್ದಾರೆ. ಕೆ. ಎಸ್. ನಾರಾಯಣಾಚಾರ್ಯ ಅವರು, 1933ರಲ್ಲಿ ಕನಕಪುರದ ಶ್ರೀ ವೈಷ್ಣವ ವೈದಿಕ ಕುಟುಂಬದಲ್ಲಿ ಜನಿಸಿದರು. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಮುಖ ಮಾಡಿದರು. ನಂತರ ಪ್ರವಚನ ಮತ್ತು ಕಾದಂಬರಿಕಾರರಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ರಾಮಾಯಣಾಚಾರ್ಯ ಎಂದೇ ಖ್ಯಾತಿ ಪಡೆದಿದ್ದರು.
ಇನ್ನು ವೇದ ಸಂಸ್ಕೃತಿಯ ಪರಿಚಯ, ಶ್ರೀ ರಾಮಾವತಾರ ಸಂಪೂರ್ಣವಾದಾ, ಶ್ರೀ ರಾಮಾಯಣ ಪಾತ್ರ ಪ್ರಪಂಚ, ಶ್ರೀ ಮಹಾಭಾರತ ಪಾತ್ರ ಪ್ರಪಂಚ, ಆಚಾರ್ಯ ಚಾಣಕ್ಯ ಸೇರಿದಂತೆ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದಾರೆ.
ಅಲ್ಲದೇ ಇವರಿಗೆ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿದ್ವನ್ಮಣಿ’, ‘ವೇದಭೂಷಣ’, ‘ವಾಲ್ಮೀಕಿ ಹೃದಯಜ್ಞ’, ‘ರಾಮಾಯಣಾಚಾರ್ಯ’, ‘ಮಹಾಭಾರತಾಚಾರ್ಯ’ ಮೊದಲಾದ ಬಿರುದುಗಳು ವಿವಿಧ ಮಠಾಧೀಶರಿಂದ ಕೆ. ಎಸ್. ನಾರಾಯಣಾಚಾರ್ಯ ಅವರಿಗೆ ದೊರೆತಿದೆ.
1933ರಲ್ಲಿ ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದರು. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಮುಖ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ(1954), ಬಿ.ಎ(ಆನರ್ಸ್)(1957), ಎಂ.ಎ(ಇಂಗ್ಲಿಷ್)(1958) ಪದವಿಗಳನ್ನು ಪಡೆದಿದ್ದಾರೆ. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಹೊರಳಿ ಪ್ರಸಿದ್ಧಿ ಪಡೆದರು.
ಕೆ. ಎಸ್.ನಾರಾಯಣಾಚಾರ್ಯ ಅವರ ಅಗಲಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

2 Responses

  1. Dr.Basavaraju.M.N.

    ಒಬ್ಬ ಶ್ರೇಷ್ಟ ಘನ ವ್ಯಕ್ತಿತ್ವವುಳ್ಳ ಆದರ್ಶ ವಿದ್ಯಾಂಸರು ನಮ್ಮೊಡನೆ ಇದುವರೆಗೆ ಇದ್ದರು. ಎನ್ನುವುದೇ ಭಾರತ ದೇಶಕ್ಕೆ ಹಿರಿಮೆ ಗರಿಮೆಗಳನ್ನು ತಂದು ಕೊಟ್ಟಿದೆ. ಇನ್ನೂ ಅನೇಕ ಶ್ರೇಷ್ಟ ವಿಧ್ವಾಂಸರು ನಮ್ಮೊಡನೆ ಇದ್ದಾರೆ. ನಾವೆಲ್ಲರು ಇಂಥವರಿಂದ ನಾವೆಲ್ಲರು ಉತ್ತಮ ರೀತಿಯಲ್ಲಿ ಪ್ರಭಾವಿತರಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಇಂತಹ ಮಹಾನುಭಾವರ ಪರಿಚಯ ಮಾಡಿ ಕೂಡಬೇಕು. ಪದೇ ಪದೇ ನೆನಪಿಗೆ ಬರುವಂತಹ ಕಾರ್ಯಕ್ರಮಗಳನ್ನು ಎಲ್ಲಾರಿಗೂ ತಲುಪುವ ಹಾಗೆ ಆಯೋಜಿಸಬೇಕು. . ಶ್ರೀಯುತರಿಗೆ ನನ್ನ ನಮನಗಳು

  2. Shivaji Patil

    ಒಬ್ಬ ದಾರ್ಶನಿಕ, ಬಹುಮುಖ ಪ್ರತಿಭೆಯ, ನಮ್ಮ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವಿದ್ದ, ಪ್ರಚಂಡ ವಾಗ್ಮಿಯನ್ನು ನಾವು ಕಳೆದುಕೊಂಡೆವು. ಅವರಿಗೆ ಸದ್ಗತಿ ಪ್ರಾಪ್ತಿಯಾಗಲಿ. ಓಂ ಶಾಂತಿ :

ನಿಮ್ಮ ಕಾಮೆಂಟ್ ಬರೆಯಿರಿ