ಡಿಸೆಂಬರ್ ೪-೫ ರಂದು ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

ಹೊನ್ನಾವರ: ತಾಲೂಕಿನ ಗುಣವಂತೆಯಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಡಿಸೆಂಬರ್ ೪ ಮತ್ತು ೫ ರಂದು ನಡೆಯಲಿದೆ ಎಂದು ಶ್ರೀಮಯ ಕಲಾಕೇಂದ್ರದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಹಾಗೂ ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ತಿಳಿಸಿದ್ದಾರೆ.
ಕೊರೊನಾ ಕಾರಣದಿಂದ ಈ ಬಾರಿ ನಾಟ್ಯೋತ್ಸವ ನಡೆಸುವುದು ಅಸಾಧ್ಯ ಎಂಬ ಆತಂಕ ಇತ್ತು. ನಿರಂತರತೆ ಕಾಪಾಡುವ ಉದ್ದೇಶದಿಂದ ಸಣ್ಣ ಪ್ರಮಾಣದಲ್ಲಷ್ಟೇ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಆದರೆ ನಾಟ್ಯೋತ್ಸವದ ಧ್ಯೇಯೋದ್ದೇಶಗಳಿಗೆ ಲೋಪವಿಲ್ಲದೆ ಅಪೂರ್ವ ಪೂರ್ವ ಸ್ಮರಣೆ, ಸನ್ಮಾನ, ಪ್ರಶಸ್ತಿ ಪ್ರಧಾನ ಇತ್ಯಾದಿಗಳೆಲ್ಲ ಹಿಂದಿನಂತೆಯೇ ಇದೆ. ಆದರೆ ಇಡೀ ದೇಶದ ವೈವಿಧ್ಯ ಪ್ರದೇಶಗಳಿಂದ ಕಲಾವಿದರನ್ನು ಕರೆಸುವುದು, ಪ್ರದರ್ಶನ ನೀಡುವುದು, ಅವರೊಂದಿಗೆ ಕಲಾ ಚಿಂತನ ನಡೆಸುವುದು ಪ್ರಸಕ್ತ ವಾತಾವರಣದ ಹಿನ್ನೆಲೆಯಲ್ಲಿ ಅಸಾಧ್ಯ. ಆದರೆ ನಮ್ಮ ಕರ್ನಾಟಕದ ಒಳಗಿನ ಮತ್ತು ಪಕ್ಕದ ಕೇರಳದಿಂದ ಕಲಾವಿದರನ್ನೂ, ಕಲಾಪ್ರಕಾರಗಳನ್ನೂ ತರಿಸುವ ಮೂಲಕ ನಾಟ್ಯೋತ್ಸವ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಿಸೆಂಬರ್ ೪ರಂದು ಉದ್ಘಾಟನೆ ನಡೆಯಲಿದ್ದು ಕಾಸರಗೋಡು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಉದ್ಘಾಟಿಸಲಿದ್ದಾರೆ.
ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-೨೦೨೦ ಅನ್ನು ಖ್ಯಾತ ರಂಗಭೂಮಿ ಕಲಾವಿದೆ, ರಾಜ್ಯಸಭಾ ಮಾಜಿ ಸದಸ್ಯೆ ಬೆಂಗಳೂರಿನ ಪದ್ಮಶ್ರೀ ಡಾ. ಬಿ. ಜಯಶ್ರೀ ಅವರಿಗೆ ನೀಡಲಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆ ಸಚಿವ ವಿ. ಸುನೀಲ ಕುಮಾರ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಂಕಣಕಾರ ಎಂ.ಕೆ. ಭಾಸ್ಕರ ರಾವ್, ಅಭಿನಂದನೆ ಸಲ್ಲಿಸುವರು. ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ. ಎಸ್. ಮಹಾಬಲೇಶ್ವರ ಭಟ್ಟ, ಕವಿ ಡಾ. ಎಚ್.ಎಸ್. ಶಿವಪ್ರಕಾಶ, ನಾ. ರವಿಕುಮಾರ, ಅಭಿನವ ಬೆಂಗಳೂರು, ಗ್ರಾ.ಪಂ. ಅಧ್ಯಕ್ಷ ಗಂಗಾಧರ ಗೌಡ ಪಾಲ್ಗೊಳ್ಳಲಿದ್ದಾರೆ.
ಸಂಜೆ ೬.೩೦ ರಿಂದ ಕಣ್ಣೂರಿನ ಶ್ರೀ ಕಣ್ಣೇಶ್ವರ ಜಾನಪದ ಕಲಾ ಸಂಘ ದವರಿಂದ ಡೊಳ್ಳು ಕುಣಿತ, ಬೆಂಗಳೂರಿನ ನಾಟ್ಯ ನಿನಾದ ಅಕಾಡೆಮಿಯ ಧರಣಿ ಟಿ. ಕಶ್ಯಪ ಮತ್ತು ತಂಡದವರಿಂದ ಕೂಚುಪುಡಿ ನ್ರತ್ಯನಾಟಕ ಬೆಂಗಳೂರಿನ ಮಂಡೋದರಿ ಕಲ್ಯಾಣ, ಹಾಗೂ ನಾಟಕ ಸ್ಪಂದನ ತಂಡ ಇವರಿಂದ ಲಕ್ಷಾಪತಿ ರಾಜನ ಕತೆ ಸಾಂಸ್ಕçತಿಕ ಕಾರ್ಯಕ್ರಮ ನಡೆಯಲಿದೆ.
ಡಿ.೫ರಂದು ಬೆಳಿಗ್ಗೆ ೧೦.೩೦ ರಿಂದ ಅಪೂರ್ವ ಪೂರ್ವ ಸ್ಮರಣೆ ಗೋಷ್ಠಿ ನಡೆಯಲಿದ್ದು ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸುವರು. ವಿದ್ವಾನ್. ಉಮಾಕಾಂತ ಭಟ್ಟ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಿವಾಕರ ಹೆಗಡೆ ಉಪನ್ಯಾಸ ನೀಡುವರು.
ಸಂಜೆ ೫ ಗಂಟೆಗೆ ಸಮಾರೋಪ ನಡೆಯಲಿದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಸುಬ್ರಾಯ ಭಾಗವತ, ಕಪ್ಪೆಕೆರೆ ಅವರಿಗೆ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪ್ರಶಸ್ತಿ ಪ್ರದಾನ ಮಾಡುವರು. ಡಾ. ಜಿ. ಕೆ. ಹೆಗಡೆ ಹರಿಕೇರಿ ಅಭಿನಂದನೆ ನುಡಿ ಆಡುವರು.
ಮುಖ್ಯ ಅಭ್ಯಾಗತರಾಗಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕುಮಾರ ಕೊಡ್ಗಿ, ಕೇರಳ ಫೋಕ್ ಲ್ಯಾಂಡ್ ಅಧ್ಯಕ್ಷ ಡಾ. ವಿ. ಜಯರಾಜನ್, ಕೆವಿಜಿ ಬ್ಯಾಂಕ್ ಜನರಲ್ ಮ್ಯಾನೇಜರ್ ನಾರಾಯಣ ಯಾಜಿ ಸಾಲೇಬೈಲ್ ಪಾಲ್ಗೊಳ್ಳುವರು.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನವನ್ನು ಸಾಹಿತಿಗಳಾದ ಎಲ್. ಆರ್. ಭಟ್ಟ ಸುಮುಖಾನಂದ ಜಲವಳ್ಳಿ, ಯಕ್ಷಗಾನ ಕಲಾವಿದರಾದ ರಾಜೀವ ಶೆಟ್ಟಿ ಹೊಸಂಗಡಿ, ಕೃಷ್ಣ ಭಂಡಾರಿ ಗುಣವಂತೆ(ಮರಣೋತ್ತರ), ಮಂಜುನಥ ಭಂಡಾರಿ, ಕರ್ಕಿ ಅವರಿಗೆ ನೀಡಿ ಗೌರವಿಸಲಾಗುತ್ತದೆ.
ಜ್ಯೋತಿ ಹೆಗಡೆ ಶಿರಸಿ ಇವರಿಂದ ರುದ್ರವೀಣೆ, ಗುರುಮೂರ್ತಿ ವೈದ್ಯ, ಬೆಂಗಳೂರು ಇವರಿಂದ ಪಖಾವಾಜ್ ಪ್ರದರ್ಶನ ನಡೆಯಲಿದೆ. ನಂತರ ಉಡುಪಿ ಕೊಡವೂರಿನ ನೃತ್ಯ ನಿಕೇತನದ ಕಲಾವಿದರಿಂದ ನಾರಸಿಂಹ ನೃತ್ಯರೂಪಕ ಹಾಗೂ ಕೇರಳದ ಪೋಕ್ ಲ್ಯಾಂಡ್ ಕರಿವೆಲ್ಲೂರು ರತ್ನಕುಮಾರ ಮತ್ತು ತಂಡದವರಿಂದ ಒಟ್ಟನ್ ತುಳ್ಳಾಲ್ ಮತ್ತು ಶೀತಂಕನ್ ತುಳ್ಳಾಲ್ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement