ತಮಾಷೆಗಾಗಿ ಸಹದ್ಯೋಗಿ ಹಿಡಿದು ಗುದದ್ವಾರಕ್ಕೆ ಗಾಳಿ ಪಂಪ್ ಮಾಡಿದ ಸ್ನೇಹಿತರು.. ಆದರೆ ವ್ಯಕ್ತಿ ಸಾವು !

ಕೋಲ್ಕತ್ತಾ: ಕೆಲವೊಮ್ಮೆ ತಮಾಷೆ ಸಂಗತಿಗಳೇ ನಾವು ಊಹಿಸದ ರೀತಿಯಲ್ಲಿ ದೊಡ್ಡ ದುರಂತವಾಗಿ ಮಾರ್ಪಡುತ್ತದೆ. ಇಂಥದ್ದೇ ಒಂದ ತಮಾಷೆ ಘಟನೆಯಲ್ಲಿ ವ್ಯಕ್ತಿಯೊಬ್ಬನ ಪ್ರಾಣಪಕ್ಷಿಯೇ ಹಾರಿಹೋಗಿದೆ..!
ತಮಾಷೆಗಾಗಿ ಸಹದ್ಯೋಗಿಗಳು ವ್ಯಕ್ತಿಯನ್ನು ಹಿಡಿದು ಆತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದಾರೆ. ಪರಿಣಾಮ ವ್ಯಕ್ತಿ ಸಾವಿಗೀಡಾದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ನಡೆದಿದೆ. ಈ ಘಟನೆ ನವೆಂಬರ್ 16 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ನೈಟ್ ಶಿಫ್ಟ್‌ನಲ್ಲಿದ್ದ ರಹಮತ್ ಅಲಿ ನವೆಂಬರ್ 16 ರಂದು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾರೆ. ಈ ವೇಳೆ ಗಿರಣಿಯಲ್ಲಿ ಸೆಣಬು ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದ ಇತರ ಸಹದ್ಯೋಗಿಗಳು ರೆಹಮತ್ ಆಲಿಯನ್ನು ಹಿಡಿದು ರಹಮತ್‌ ಅಲಿ ಗುದದ್ವಾರಕ್ಕೆ ಏರ್‌ಪಂಪ್(Air Pump) ಇಟ್ಟು ಗಾಳಿಯನ್ನು ಪಂಪ್ ಮಾಡಿದ್ದಾರೆ. ಆತ ವಿರೋಧಿಸಿದರೂ ಗಟ್ಟಿಯಾಗಿ ಹಿಡಿದು ಬಲವಂತವಾಗಿ ಪಂಪ್‌ ಮಾಡಿದ್ದಾರೆ. ಅವರಿಗೆ ಅದು ಕೇವಲ ತಮಾಷೆಯಾಗಿತ್ತು. ಆದರೆ ಪರಿಣಾಮ ಮಾತ್ರ ದುರಂತಮಯವಾಗಿತ್ತು.
ಗುದದ್ವಾರಕ್ಕೆ ಏರ್‌ಪಂಪ್ ಮಾಡುತ್ತಿದ್ದಂತೆ ರಹಮತ್ ಆಲಿ ಆರೋಗ್ಯದಲ್ಲಿ ಏರುಪೇರಾಗಿದೆ. ಕ್ಷಣದಲ್ಲೇ ರೆಹಮತ್ ಅಲಿ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡ ಸಹದ್ಯೋಗಿಗಳು ಸ್ಥಳೀಯ ಚುಂಚುರಾ ಇಮಾಮ್‌ಬಾರಾ ಆಸ್ಪತ್ರಗೆ(Hospital) ದಾಖಲಿಸಿದ್ದಾರೆ. ಆದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮರುದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುದದ್ವಾರದಿಂದ ಒತ್ತಡದಿಂದ ಪಂಪ್‌ ಮಾಡಿದ ಗಾಳಿಯಿಂದಾಗಿ ರಹಮತ್ ಆಲಿ ಲಿವರ್ ಸೇರಿದಂತೆ ಇತರ ಅಂಗಾಗಳ ಮೇಲೆ ತೀರ ಒತ್ತಡ ಬಿದ್ದು ಅವು ಡ್ಯಾಮೇಜ್ ಆಗಿವೆ ಪ್ರಜ್ಞಾಹೀನ ಸ್ಥತಿಯಲ್ಲೇ ಇದ್ದ ರೆಹಮತ್ ಅಲಿಗೆ ತುರ್ತು ನಿಘಾ ಘಟಕದಲ್ಲಿ ಇಟ್ಟು 10 ದಿನ ಸತತ ಚಿಕಿತ್ಸೆ ನೀಡಿದರೂ ರೆಹಮತ್ ಅಲಿ ಮಾತ್ರ ಬದುಕು ಉಳಿಯಲಿಲ್ಲ.
ಈಗ ರೆಹಮತ್ ಆಲಿ ಕುಟುಬಂಸ್ಥರು ದೂರು ನೀಡಿದ್ದಾರೆ. ಪರಿಹಾರ ಹಣ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ತಮಾಷೆ ಪ್ರಕರಣದಲ್ಲಿ ಸಹದ್ಯೋಗಿ ಶೆಹಝಾದಾ ಖಾನ್ ಪ್ರಮುಖ ಆರೋಪಿಯಾಗಿದ್ದಾನೆ. ಇವರ ಮೇಲೆ ಕೇಸ್ ದಾಖಲಾಗಿದೆ. ಸಹದ್ಯೋಗಿಗಳು ರೆಹಮತ್ ಆಲಿಯ ನಿಧನರಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.
ಈ ಘಟನೆ ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ನಡೆದಿದೆ. ಆದರೆ ಮಿಲ್ ಮೃತ ಉದ್ಯೋಗಿ ರೆಹಮತ್ ಆಲಿಗೆ ಪರಿಹಾರ ನೀಡುವ ಭರವಸೆ ನೀಡಿಲ್ಲ.
ರಹಮತ್ ಆಲಿ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಹೋದರ ಅಜ್ಮತ್ ಆಲಿ, ರಹಮತ್ ಆಲಿಯನ್ನು ಹಿಡಿದು ಬಲವಂತವಾಗಿ ಆತನ ಗುದದ್ವಾರಕ್ಕೆ ಏರ್ ಪಂಪ್ ಮಾಡುವ ತಮಾಷೆಯನ್ನು ಮೊದಲೇ ಯೋಜಿಸಲಾಗಿತ್ತು. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ಭೀಕರ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ‘ಐಎಸ್‌ಐ’ ಬೆಂಬಲಿತ ಉಗ್ರ ಜಾಲ ಭೇದಿಸಿದ ಪೊಲೀಸರು : 7 ಮಂದಿ ಕುಖ್ಯಾತರ ಬಂಧನ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement