ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ: ಕೋಲ್ಕತ್ತಾದಲ್ಲೂ ಕಂಪನದ ಅನುಭವ

ನವದೆಹಲಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಶುಕ್ರವಾರ ಬೆಳಿಗ್ಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಎಂದು ತಿಳಿಸಿದೆ.
ಭಾರತದ ಈಶಾನ್ಯ ಭಾಗಗಳಾದ ತ್ರಿಪುರಾ, ಮಣಿಪುರ, ಮಿಜೊರಾಂ, ಅಸ್ಸಾಂಮ್ ಅಲ್ಲದೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ವರೆಗೂ ಭೂಕಂಪನದ ಅನುಭವವಾಗಿದೆ.
ಯುರೋಪಿಯನ್ – ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‍ನ ವೆಬ್ಸೈಟ್(ಇಎಮ್‍ಎಸ್‍ಸಿ)ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದೆ.
ಬಾಂಗ್ಲಾದೇಶದ ಚಿತ್ತಗಾಂಗ್ ನಿಂದ ಪೂರ್ವಕ್ಕೆ 183 ಕಿ.ಮೀ ದೂರದ 30 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಮುಂಜಾನೆ ಸುಮಾರು 5:15 ಗಂಟೆಗೆ ಮೊದಲ ಬಾರಿ ಭೂಮಿ ಕಂಪಿಸಿದರೆ, 5:53 ಕ್ಕೆ ಎರಡನೇ ಬಾರಿ ಕಂಪಿಸಿದೆ. ಭೂಕಂಪದ ಅನುಭವದ ಬಗ್ಗೆ ಮಿಜೋರಾಂನ ಥೆನ್ಜಾವ್ಲ್ ಎಂಬವರು “ನಾನು ಅನುಭವಿಸಿದ ಅತೀ ದೀರ್ಘವಾದ ಭೂಕಂಪಗಳಲ್ಲಿ ಇದು ಒಂದು” ಎಂದು ಟ್ವೀಟ್ ಮಾಡಿದ್ದಾರೆ.
ಕೋಲ್ಕತ್ತಾ ಮತ್ತು ಗುವಾಹಟಿಯ ಹೆಚ್ಚಿನ ಭಾಗಗಳಲ್ಲಿ ಭೂಕಂಪವು ಸುಮಾರು 30 ಸೆಕೆಂಡುಗಳಷ್ಟು ದೀರ್ಘವಾಗಿತ್ತು ಮತ್ತು ಅದರ ಪರಿಣಾಮಗಳು ಕಂಡುಬಂದಿವೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಮತ್ತೋರ್ವ ಪ್ರತ್ಯಕ್ಷದರ್ಶಿ ಭೂಕಂಪನದ ಅನುಭವ ಚಿತ್ತಗಾಂಗ್​ನಲ್ಲಿಯೂ ಆಗಿದೆ ಎಂದು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ