ಕನ್ನಡ ಗಡಿತಿಲಕ ಪ್ರಶಸ್ತಿಗೆ ವಚನ ಅಧ್ಯಯನ ಕೇಂದ್ರ, ಸರಜೂ ಕಾಟ್ಕರಗೆ ಪ್ರಶಸ್ತಿ

ಬೆಳಗಾವಿ : ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿ ವರ್ಷ ಕೊಡಮಾಡುವ 2019ನೇ ಸಾಲಿನ ಕನ್ನಡ ಗಡಿತಿಲಕ ಪ್ರಶಸ್ತಿಗೆ ಇಲ್ಲಿಯ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಅಂಗಸಂಸ್ಥೆಯಾದ ವಚನ ಅಧ್ಯಯನ ಕೇಂದ್ರ ಹಾಗೂ 2020ನೇ ಸಾಲಿನ ಪ್ರಶಸ್ತಿಗೆ ಗಡಿನಾಡಿನ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ಆಯ್ಕೆಯಾಗಿದ್ದಾರೆ .
ಡಿಸೆಂಬರ್ 12 ರಂದು ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ರಾಮಕೃಷ್ಣ ಮರಾಠೆ ತಿಳಿಸಿದ್ದಾರೆ .
ವಚನ ಸಾಹಿತ್ಯವನ್ನು ಒಂದೆಡೆ ದಾಖಲಿಸುವ ಸದುದ್ದೇಶದಿಂದ ಬೆಳಗಾವಿ ನಾಗನೂರು ರುದ್ರಾಕ್ಷಿಮಠವು 1995ರಲ್ಲಿ ಈ ಕೇಂದ್ರವನ್ನು ಆರಂಭಿಸಿತು. ಶ್ರೀ ಸಿದ್ದರಾಮ ಸ್ವಾಮಿಗಳ ಆಶಯದ ಫಲವಾಗಿ ಬೃಹದಾಕಾರವಾಗಿ ಬೆಳೆದು ನಿಂತಿದೆ . ಎಪ್ಪತ್ತು ಸಾವಿರ ಮೌಲಿಕ ಗ್ರಂಥಗಳು , ಹಸ್ತಪ್ರತಿ ಹಾಗೂ ತಾಡೋಲೆಗಳ ಸಂಗ್ರಹದಿಂದಾಗಿ ಸಂಶೋಧನ – ಅಧ್ಯಯನ ನಡೆಸುವವರಿಗೆ ದಾರಿ ದೀಪವಾಗಿದೆ .
ಡಾ.ಸರಜೂ ಕಾಟ್ಕರ್ : ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೇಳಿ ಬರುವ ಪ್ರಮುಖ ಹೆಸರು ಡಾ.ಕಾಟ್ಕರ್ . ಸಾಹಿತ್ಯ ಮತ್ತು ಪತ್ರಿಕೆ ಇವರ ಎರಡು ಪ್ರಬಲ ಮಾಧ್ಯಮಗಳು ಎರಡರಲ್ಲಿಯೂ ಇವರದು ಗಮನಾರ್ಹ ಸೇವೆ . ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸರಜೂ ಎಪ್ಪತ್ತು ಕೃತಿಗಳನ್ನು ನೀಡಿ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ .

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement