ಮಂಗಳೂರು: ಮಂಗಳೂರಿನ ಕಾರಿನ ಶೋ ರೂಂ ಆವರಣಕ್ಕೆ ಕಾಡು ಹಂದಿಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ಘಟನೆ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ವಿಡಿಯೊದಲ್ಲಿ ಕಾಡುಹಂದಿ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಆತನ ಮೇಲೆ ಆಕ್ರಮಣ ಮಾಡುತ್ತಿರುವುದು ಕಾಣುತ್ತದೆ. ನಗರ ಪ್ರದೇಶಕ್ಕೆ ಕಾಡು ಹಂದಿ ಬಂತು ಎನ್ನುವುದು ಅರ್ಥವಾಗಿಲ್ಲ. ನವೆಂಬರ್ 24 ರಂದು ಈ ಘಟನೆ ನಡೆದಿದ್ದು, ನಗರದ ಪಡೀಲ್ ರೈಲ್ವೆ ಬ್ರಿಡ್ಜ್ ಸಮೀಪ ಇರುವ ಕಾರ್ ಶೋರೂಂ ಆವರಣಕ್ಕೆ ಹೆದ್ದಾರಿ ದಾಟಿ ಮುಖ್ಯದ್ವಾರದ ಮೂಲಕವೇ ಕಾಡುಹಂದಿ ನುಗ್ಗಿದ್ದು, ಆವರಣದಲ್ಲಿ ನಡೆದು ಹೋಗುತ್ತಿದ್ದ ಓರ್ವನ ಹಿಂದೆ ತಿವಿಯಲು ಯತ್ನಿಸಿದೆ. ಅದೃಷ್ಟವಶಾತ್ ಅವರು ಅವರು ಪಾರಾಗಿದ್ದಾರೆ. ವ್ಯಕ್ತಿ ಕಾರು ಶೋರೂಮೊಂದರ ಸಿಬ್ಬಂದಿ ಎನ್ನಲಾಗಿದೆ. ಅವರ ಮೇಲೆ ಯಾಕೆ ಹಂದಿಗೆ ಈ ಪರಿ ಸಿಟ್ಟು ಬಂದಿದೆ ಯಾರಿಗೂ ಗೊತ್ತಿಲ್ಲ.
ಡೆಡ್ ಎಂಡ್ ವರೆಗೆ ಹೋಗಿ ನಂತರ ತಾನು ಬಂದ ದಾರಿಯಲ್ಲಿ ವಾಪಸ್ಸು ಓಡಿಬರುತ್ತದೆ. ಕೆಲ ಸಮಯದ ಬಳಿಕ ಕಾಡು ಹಂದಿ ರಸ್ತೆ ದಾಟಿ ಪಕ್ಕದ ಕಾಡಿನ ಕಡೆಗೆ ಓಡಿದೆ. ಹಂದಿ ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ