ಆಸ್ತಿ ಆಸೆಗೆ ಬಾಂಡ್ ಪೇಪರ್ ಮೇಲೆ ಮೃತ ಮಹಿಳೆ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಗಳು..!

posted in: ರಾಜ್ಯ | 0

ಮೈಸೂರು: ಆಸ್ತಿಯ ಹುಚ್ಚು ಜನರಿಂದ ಏನೆಲ್ಲಾ ಮಾಡಿಸುತ್ತದೆ ಎಂಬುದಕ್ಕೆ ನಿದರ್ಶನವಾಗಬಲ್ಲ ಘಟನೆಯೊಂದು ನಗರದಲ್ಲಿ ನಡೆದಿದ್ದು, ಆಸ್ತಿ ಸಲುವಾಗಿ ಖಾಲಿ ಬಾಂಡ್ ಪೇಪರ್ ಮೇಲೆ ಮೃತದೇಹದ ಹೆಬ್ಬೆಟ್ಟು ಒತ್ತಿಸಿಕೊಂಡ ಅಮಾನವೀಯ ಘಟನೆ ನಗರದ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಗಳು ತಿಳಿಸಿವೆ.
ನಗರದ ಶ್ರೀರಾಂಪುರ ನಿವಾಸಿ ಜಯಮ್ಮ(63) ಕೆಲ ದಿನಗಳ ಹಿಂದೆ ವಯೋಸಹಜವಾಗಿ ಕಾಯಿಲೆಯಿಂದ ಮೃತಪಟ್ಟಿದ್ದರು. ಆಸ್ತಿ ಆಸೆಗಾಗಿ ಆಕೆ ಸತ್ತ ಬಳಿಕ ಮೃತರ ಸಂಬಂಧಿಕರು ಖಾಲಿ ಬಾಂಡ್ ಪೇಪರ್ ಮೇಲೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದಾರೆ. ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಮತ್ತೋರ್ವ ಸಂಬಂಧಿ ವಿಡಿಯೋ ತುಣುಕನ್ನು ವೈರಲ್ ಮಾಡಿದ್ದಾರೆ.
ಸಂಬಂಧಿಕರು ಮೃತ ವೃದ್ಧೆಯಿಂದ ಹೆಬ್ಬೆಟ್ ಮುದ್ರೆ ಹಾಕಿಸಿಕೊಳ್ಳುತ್ತಿದ್ದಾಗ ಮಹಿಳೆಯೊಬ್ಬರು ಪ್ರಶ್ನಿಸಿ, ಸಂಬಂಧಿಕರ ನಡೆಯನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ವಿದ್ಯಾರಣ್ಯಾಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಿಡಿಯೋದಲ್ಲಿ ಇರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ