ಹೃದಯಾಘಾತವಾದ ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯ ಹೃದಯಾಘಾತದಿಂದ ಸಾವು, ರೋಗಿಯೂ ಸಾವು..!

ಹೈದರಾಬಾದ್: ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯನಿಗೂ ಹೃದಯಾಘಾತವಾಗಿ ಇಬ್ಬರೂ ಮೃತಪಟ್ಟ ಘಟನೆ ವರದಿಯಾಗಿದೆ.
ಘಟನೆ ತೆಲಂಗಾಣದ ಕಾಮಾರೆಡ್ಡಿಯ ಜಿಲ್ಲೆಯ ಗಾಂಧಾರಿ ಮಂಡಲದ ಗುಜ್ಜುತಾಂಡ ಎಂಬಲ್ಲಿ ನಡೆದಿದೆ. ಡಾ.ಲಕ್ಷ್ಮಣ್ ಹಾಗೂ ಗುಜ್ಜುಲ್‌ನ ಗಣ್ಯಾ ನಾಯಕ್ (52 ವರ್ಷ ) ಎಂಬವರೇ ಮೃತಪಟ್ಟವರು.
ಇಂದು ಬೆಳಗ್ಗೆ ಗಣ್ಯಾ ನಾಯಕ್‌ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಗಾಂಧಾರಿಯ ಎಸ್.ವಿ. ಶ್ರೀಜಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆಯಲ್ಲಿ ಡಾ.ಲಕ್ಷ್ಮಣ್ ಅವರು ಗಣ್ಯ ನಾಯಕ್ ಅವರನ್ನು ಪರೀಕ್ಷಿಸಿ ಚಿಕಿತ್ಸೆ ಆರಂಭಿಸಿದರು. ಐಸಿಯುನಲ್ಲಿ ಡಾ. ಲಕ್ಷಣ್‌ ಅವರು ಚಿಕಿತ್ಸೆಯನ್ನು ನೀಡುತ್ತಿದ್ದ ವೇಳೆ ವೈದ್ಯರಿಗೂ ಹೃದಯಾಘಾತವಾಯಿತು, ಸ್ವಲ್ಪ ಹೊತ್ತಲ್ಲೇ ವೈದ್ಯರು ಮೃತಪಟ್ಟಿದ್ದಾರೆ, ಈ ವೇಳೆಯಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಗಣ್ಯಾ ನಾಯಕ್‌ ಅವರು ಕೂಡ ಸಾವಿಗೀಡಾಗಿದ್ದಾರೆ. ಪರೀಕ್ಷಿಸುತ್ತಿದ್ದ ವೈದ್ಯ ಹಾಗೂ ರೋಗಿ ಏಕಕಾಲದಲ್ಲಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ