ತ್ರಿಪುರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌, ಟಿಎಂಸಿಗೆ ಮುಖಭಂಗ

ಅಗರ್ತಲಾ: ನವೆಂಬರ್ 15 ರಂದು ನಡೆದ ಚುನಾವಣೆಯಲ್ಲಿ ತ್ರಿಪುರಾದ 14 ನಗರ ಸಂಸ್ಥೆಗಳನ್ನು ಗೆಲ್ಲುವ ಮೂಲಕ ಬಿಜೆಪಿ (BJP) ಭರ್ಜರಿ ಗೆಲುವು ಸಾಧಿಸಿದೆ.
ಪುರಾದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಅಗರ್ತಲಾ ನಗರ ಪಾಲಿಕೆ (ಎಎಂಸಿ) 51 ವಾರ್ಡ್‌ಗಳಲ್ಲೂ ಗೆಲುವು ಸಾಧಿಸುವ ಮೂಲಕ ಬಿಜೆಪಿ ಕ್ಲೀನ್‌ಸ್ವೀಪ್‌ ಮಾಡಿದೆ.
ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ 14 ನಗರ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದೆ.  222 ಸ್ಥಾನಗಳಲ್ಲಿ ಚುನಾವಣೆ ನಡೆದಿದ್ದು ಈ ಪೈಕಿ ಬಿಜೆಪಿ 217ರಲ್ಲಿ ಗೆಲುವು ಸಾಧಿಸಿದೆ.ಒಟ್ಟು 222 ಸ್ಥಾನಗಳಲ್ಲಿ 217 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪ್ರತಿಪಕ್ಷ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಇತರರಿಗೆ ಆಘಾತ ನೀಡಿದೆ. ಅವಿರೋಧವಾಗಿ ಆಯ್ಕೆಯಾದ ಸ್ಥಾನಗಳನ್ನು ಸೇರಿಸಿದರೆ, 334 ಸ್ಥಾನಗಳಲ್ಲಿ 329 ಬಿಜೆಪಿ ಪಾಲಾಗಿದೆ.
ಎಎಂಸಿ 51 ವಾರ್ಡ್‌ಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ವಾರ್ಡ್‌ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಸಿಪಿಐ(ಎಂ) ಪಕ್ಷಗಳು ಖಾತೆ ತೆರೆಯಲೂ ವಿಫಲವಾಗಿವೆ. 15 ಸದಸ್ಯ ಬಲದ ಖೋವೈ ಮುನ್ಸಿಪಲ್‌ ಕೌನ್ಸಿಲ್‌, 17 ಸದಸ್ಯ ಬಲದ ಬೆಲೋನಿಯಾ ಮುನ್ಸಿಪಲ್‌ ಕೌನ್ಸಿಲ್‌, 15 ಸದಸ್ಯ ಬಲದ ಕುಮಾರ್‌ಘಾಟ್‌ ಮುನ್ಸಿಪಲ್‌ ಕೌನ್ಸಿಲ್‌ ಮತ್ತು 9 ಸದಸ್ಯ ಬಲದ ಸಬ್‌ರೂಮ್‌ ನಗರ್‌ ಪಂಚಾಯತ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ರಾಜ್ಯ ಚುನಾವಣೆ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಧರ್ಮನಗರ ಮುನ್ಸಿಪಲ್‌ ಕೌನ್ಸಿಲ್‌ನ 25 ವಾರ್ಡ್‌ ಹಾಗೂ 15 ಸದಸ್ಯ ಬಲದ ತೆಲಿಯಾಮುರ ಮುನ್ಸಿಪಲ್‌ ಕೌನ್ಸಿಲ್‌ ಮತ್ತು 13 ಸದಸ್ಯ ಬಲದ ಅಮರ್‌ಪುರ್‌ ನಗರ ಪಂಚಾಯಿತಿಯ ಎಲ್ಲಾ ಸ್ಥಾನಗಳನ್ನೂ ಗೆಲ್ಲುವ ಮೂಲಕ ಬಿಜೆಪಿ ಕ್ಲೀನ್‌ಸ್ವೀಪ್‌ ಸಾಧಿಸಿದೆ.
ಕಳೆದ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಎಲ್ಲಾ ನಗರ ಸಂಸ್ಥೆಗಳಲ್ಲಿ ಗೆದ್ದಿದ್ದ ಸಿಪಿಐ(ಎಂ), ಕೈಲಾಶಹರ್ ಮತ್ತು ಅಂಬಾಸ್ಸಾ ಮುನ್ಸಿಪಲ್ ಕೌನ್ಸಿಲ್‌ಗಳು ಮತ್ತು ಪಾಣಿಸಾಗರ್ ನಗರ ಪಂಚಾಯತ್ ಮೂರು ನಗರ ಸಂಸ್ಥೆಗಳ ಮೂರು ಸ್ಥಾನಗಳಲ್ಲಿ ಗೆದ್ದಿದೆ. ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ನಲ್ಲಿ ಬಿಜೆಪಿ ನಂತರ ಎರಡನೇ ಅತಿ ಹೆಚ್ಚು ಮತಗಳನ್ನು ಪಡೆದಿರುವ ತೃಣಮೂಲ ಕಾಂಗ್ರೆಸ್ (TMC), ಅಂಬಾಸಾ ನಗರ ಪಂಚಾಯತ್‌ನಲ್ಲಿ ಒಂದು ಸ್ಥಾನವನ್ನು ಗೆದ್ದಿದೆ. ತ್ರಿಪುರಾದ ರಾಜವಂಶಸ್ಥ ಪ್ರದ್ಯೋತ್ ಕಿಶೋರ್ ನೇತೃತ್ವದ ಟಿಪ್ರಾ ಮೋಥಾ ಒಂದು ಸ್ಥಾನವನ್ನು ಗೆದ್ದುಕೊಂಡಿದೆ.
ನವೆಂಬರ್ 25 ರಂದು ರಾಜ್ಯದ 20 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 14 ಕ್ಕೆ ಚುನಾವಣೆ ನಡೆದಿತ್ತು. ರಾಜ್ಯದ ಒಟ್ಟು 324 ಪುರಸಭೆ ಸ್ಥಾನಗಳ ಪೈಕಿ ಬಿಜೆಪಿ 112 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು. ಉಳಿದ 222 ಸ್ಥಾನಗಳಲ್ಲಿ ಶೇ.81.54ರಷ್ಟು ಮತದಾನವಾಗಿದೆ. ಇದರೊಂದಿಗೆ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ ಮೊದಲ ಬಾರಿಗೆ ವಿಪಕ್ಷವಿಲ್ಲದೆ ಬಿಜೆಪಿ ಅಧಿಕಾರ ನಡೆಸಲಿದೆ.
ಇದು “ಐತಿಹಾಸಿಕ” ಗೆಲುವು ಎಂದು ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ. ತ್ರಿಪುರಾದ ಜನರು ಮತ ಚಲಾಯಿಸುವ ಮೂಲಕ “ಸೋಥಿಕ್ ಜೋಬಾಬ್” (ಸರಿಯಾದ ಉತ್ತರ) ನೀಡಿದ್ದಾರೆ, ಇದು ಬಿಜೆಪಿ 98.50 ರಷ್ಟು ಸ್ಥಾನಗಳನ್ನು ಗೆಲ್ಲುವುದನ್ನು ಖಚಿತಪಡಿಸಿದೆ ಎಂದಿದ್ದಾರೆ.
ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಜನರು ಒಟ್ಟಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಪರವಾಗಿ ಮತ ಚಲಾಯಿಸಿದ್ದಾರೆ” ಎಂದು ದೇಬ್ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಅನ್ನು ಹೆಸರಿಸದೆ, ದೇಬ್ ಅವರು “ತ್ರಿಪುರಾವನ್ನು ಅವಮಾನಿಸಲು” ಮತ್ತು “ಪಿತೂರಿಗಳ ಮೂಲಕ ಅದನ್ನು ಕೀಳಾಗಿ” ಪ್ರಯತ್ನಿಸುವವರಿಗೆ ಚುನಾವಣಾ ಆದೇಶವು ಪ್ರತ್ಯುತ್ತರವಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement