ಕೈವಾರದಲ್ಲಿ ನಡೆಯಿತು ಅಪರೂಪದ ಮದುವೆ.. ಗಮನ ಸೆಳೆದ ಕುಳ್ಳ-ಕುಳ್ಳಿಯ ವಿವಾಹ..!

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಶ್ರೀ ಕ್ಷೇತ್ರದಲ್ಲಿ ಭಾನುವಾರ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ.
ದೇವಸ್ಥಾನಕ್ಕೆ ಬಂದವರು ನೂತನ ವಧು ವರರಿಗೆ ಆಶಿರ್ವಾದ ಮಾಡಿ ನೂರು ಕಾಲ ಚೆನ್ನಾಗಿರಲಿ ಎಂದು ನಗುತ್ತಲೇ ಹಾರೈಸಿದ್ದಾರೆ. ಈ ಮುದುವೆ ವಿಶೇಷವೇನೆಂದರೆ ಿದು ಕುಳ್ಳ-ಕುಳ್ಳಿಯ ಮದವೆ.
ಟಿ ದಾಸರಹಳ್ಳಿ ಮೂಲದ ಹಾಗೂ ಎನ್‌ಜಿಒದಲ್ಲಿ ಕೆಲಸ ಮಾಡುತ್ತಿರುವ 3 ಅಡಿ 8 ಇಂಚು ಎತ್ತರದ 28 ವರ್ಷದ ಯುವಕ ವಿಷ್ಣುಚಾರಿ ಹಾಗೂ ಕೋಲಾರ ತಾಲೂಕಿನ ಕೋಡಿರಾಮಸಂದ್ರದ ನಿವಾಸಿ ಹಾಗೂ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ 3 ಅಡಿ 5 ಇಂಚು ಎತ್ತರ ಯುವತಿ ಜ್ಯೋತಿ ಅವರು ಇಲ್ಲಿ ಭಾನುವಾರ ವಿವಾಹವಾಗಿದ್ದಾರೆ.
ವಿಷ್ಣುಚಾರಿ ಹಾಗೂ ಜ್ಯೋತಿ ಇಬ್ಬರು ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಸಮಾರಂಭವೊಂದಕ್ಕೆ ಹೋಗಿದ್ದಾಗ ಇವರಿಬ್ಬರಿಗೂ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿದೆ. ಆಗ ವಿಷ್ಣು ಅವರು ಜ್ಯೋತಿ ಮನೆಯವರಿಗೆ ಮದುವೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಎರಡೂ ಮನೆಯರು ಪರಸ್ಪರ ಮಾತನಾಡಿ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಶ್ರೀ ಕ್ಷೇತ್ರ ಯೋಗಿನಾರಾಯಣರ ತೋಪೋಭೂಮಿಯಾಗಿರುವ ಕೈವಾರದಲ್ಲಿ ಸರಳ ಹಾಗೂ ಉಚಿತ ಮದುವೆಗಳು ನಡೆಯುವುದು ಸಾಮಾನ್ಯ. ಅಲ್ಲದೆ, ಕೈವಾರದ ದೇವಸ್ಥಾನದಲ್ಲಿ ನಡೆದ ಮದುವೆಗಳಿಗೆ ಜೀವನದಲ್ಲಿ ಯಾವುದೇ ಅಡೆ ತಡೆ ಸಮಸ್ಯೆಗಳು ಬರುವುದಿಲ್ಲ ಎನ್ನುವ ಬಲವಾದ ನಂಬಿಕೆ ಇರುವ ಕಾರಣ ಅವರು ಕೈವಾರದಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಈ ಅಪರೂಪದ ಜೋಡಿಗಳ ಮದುವೆಯನ್ನು ನೋಡಿದ ದೇವಸ್ಥಾನಕ್ಕೆ ಬಂದ ಭಕ್ತರು ಅವಾಕ್ಕಾಗಿದ್ದಾರೆ. ನಂತರ ಹತ್ತಿರ ಬಂದು ನೋಡಿದಾಗ ಇದು ಕುಳ್ಳ-ಕುಳ್ಳಿಯರ ಮದುವೆ ಎಂಬುದು ಗೊತ್ತಾಗಿದೆ. ದೇವಸ್ಥಾನದಲ್ಲಿ ಕುಬ್ಜ ಜೋಡಿಯ ಮದುವೆ ನೋಡಿ ಪುಳಕಿತಗೊಂಡ ಜನರು, ಜೋಡಿಯ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement