ಈ ಪುಟ್ಟ ಪೋರಿಯ ಅದ್ಭುತ ಜಿಮ್ನಾಸ್ಟಿಕ್ಸ್‌ ಕಸರತ್ತು ನೋಡಿದ್ರೆ ಕ್ಲೀನ್‌ ಬೌಲ್ಡ್‌ ಆಗ್ತೀರಾ..! ವೀಕ್ಷಿಸಿ

ಈ ಪುಟಾಣಿಯ ಜಿಮ್ನಾಸ್ಟಿಕ್‌ ಕಸರತ್ತು ನೀಡಿದವರು ಬೆರಗಾಗಲೇಬೇಕು, ತಲೆದೂಗಲೇಬೇಕು. ಹಾಗಿದೆ ಈ ಪೋರಿಯ ಕಸರತ್ತು…!
ಈ ಪುಟಾಣಿ ಜಿಮ್ನಾಸ್ಟಿಕ್‌ ಪ್ರತಿಭೆಯ ವಿಡಿಯೊ ನಮ್ಮನ್ನು ಕ್ಷಣಾರ್ಧದಲ್ಲಿ ಸೆಳೆದು ಬಿಡುತ್ತಾಳೆ. ಅದ್ಭುತ ಜಿಮ್ನಾಸ್ಟಿಕ್ ಕೌಶಲ್ಯಗಳನ್ನು ಪ್ರದರ್ಶಿಸುವ ಈ ವಿಡಿಯೊವನ್ನು ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 1.11 ನಿಮಿಷದ ಈ ಕ್ಲಿಪ್‌ನಲ್ಲಿ ಪುಟಾಣಿ ತುಂಬಾ ಸರಾಗವಾಗಿ ಅತ್ಯಂತ ಕಠಿಣ ಜಿಮ್ನಾಸ್ಟಿಕ್ ಕೌಶಲ್ಯಗಳನ್ನು ಪ್ರದರ್ಶಿಸುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ಪುಟಾಣಿ ತೋರುವ ಕೌಶಲ್ಯ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ. ಪುಟಾಣಿ ಕೈಕಾಲುಗಳು ಸ್ಪ್ರಿಂಗ್‌ನಂತೆ ಹೇಗೆ ಬೇಕಾದರೂ ಬಾಗುತ್ತದೆ. ಹೇಗೆ ಬೇಕಾದರೂ ಹುಡುಗಿ ತನ್ನ ಆಕಾರ ಬದಲಾಯಿಸುತ್ತಾಳೆ. ಪುಟಾಣಿಯ ಕಸರತ್ತು  ವಿಸ್ಮಿತರನ್ನಾಗಿ ಮಾಡುತ್ತದೆ.
ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ ಇಂತಹ ಕ್ಲಿಷ್ಟವಾದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಸಾಧ್ಯ ಎಂಬುದನ್ನು ಪುಟಾಣಿ ಮಾಡಿ ತೋರಿಸಿದ್ದಾಳೆ. ಇ ಈ ವಿಡಿಯೋ ಈಗ ಲಕ್ಷಾಂತರ ವೀಕ್ಷಣೆ ಮತ್ತು ಪ್ರತಿಕ್ರಿಯೆ ಗಳಿಸುವಲ್ಲಿ ಯಶಸ್ವಿಯಾಗಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement