ಮೊಸಳೆ ಪ್ರತಿಮೆ ಎಂದು ಭಾವಿಸಿ ನೀರಿಗಿಳಿದ ವ್ಯಕ್ತಿ ಮೇಲೆ ಮೊಸಳೆ ದಾಳಿ, ತೋಳಿಗೆ ಗಾಯ..ದೃಶ್ಯ ವಿಡಿಯೊದಲ್ಲಿ ಸೆರೆ

68 ವರ್ಷದ ವ್ಯಕ್ತಿಯೊಬ್ಬರ ಮೇಲೆ ಬೃಹತ್ ಮೊಸಳೆ ದಾಳಿ ಮಾಡಿದ್ದು, ಗಾಯಗೊಂಡಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ವ್ಯಕ್ತಿ ತನ್ನ ಜನ್ಮದಿನದಂದು ಫಿಲಿಪೈನ್ಸ್‌ನ ಕಗಾಯನ್ ಡಿ ಓರೊ ಸಿಟಿಯಲ್ಲಿರುವ ಅಮಯಾ ವ್ಯೂ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಭೇಟಿ ನೀಡಿದಾಗ ಸಂಭವಿಸಿದೆ.
ಹಂಚಿಕೊಂಡಿರುವ ವಿಡಿಯೊದಲ್ಲಿ, ವ್ಯಕ್ತಿಯು ಮೊಸಳೆಯ ಪ್ರತಿಮೆ ಎಂದು ತಪ್ಪಾಗಿ ಭಾವಿಸುವ ಮೂಲಕ ಚಿತ್ರವನ್ನು ತೆಗೆದುಕೊಳ್ಳಲು ಉದ್ಯಾನವನದೊಳಗಿನ ಸಣ್ಣ ನೀರಿನ ಹೊಂಡಕ್ಕೆ ಇಳಿದಿದ್ದಾರೆ. ಇದು ನಿಜವಾದ 12 ಅಡಿ ಉದ್ದದ ಮೊಸಳೆ ಎಂದು ಅದು ದಾಳಿ ಮಾಡಿದಾಗಲೇ ವ್ಯಕ್ತಿಗೆ ಗೊತ್ತಾಗಿದೆ. ವ್ಯಕ್ತಿ ನೀರಿಗಿಳಿದ ಕೆಲವು ಸೆಕೆಂಡುಗಳಲ್ಲಿ ಬೃಹತ್‌ ಮೊಸಳೆ ದಾಳಿ ಮಾಡಿದೆ. ಹಾಗೂ ವ್ಯಕ್ತಿಯ ತೋಳನ್ನು ಕಚ್ಚಲು ಪ್ರಯತ್ನಿಸುತ್ತದೆ. ಅದೃಷ್ಟವಶಾತ್, ಅವರು ಮೊಸಳೆಯ ದವಡೆಯಿಂದ ಬಿಡಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಮತ್ತು ಸುರಕ್ಷಿತವಾಗಿ ಪಾರಾಗಿದ್ದಾರೆ. ಆಗ ಉದ್ಯಾನದ ಸಿಬ್ಬಂದಿಯಿಂದ ಗಾಯಗಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.

 

ನಿಮ್ಮ ಕಾಮೆಂಟ್ ಬರೆಯಿರಿ

advertisement