ಕೋಳಿಗೆ ಅರ್ಧ ಟಿಕೆಟ್ ದರ ಕೊಟ್ಟು ಹೈದರಾಬಾದ್​ನಿಂದ ಗಂಗಾವತಿಗೆ ಪ್ರಯಾಣಿಸಿದ ವ್ಯಕ್ತಿ..!

ಕೊಪ್ಪಳ: ಪ್ರಯಾಣಿಕರೊಬ್ಬರು ತನ್ನ ಕೋಳಿಗೂ ಅರ್ಧ ಟಿಕೆಟ್ ದರ ಕೊಟ್ಟು ಪ್ರಯಾಣಿಸಿದ ವಿದ್ಯಮಾನವೊಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕೆಎಸ್ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರು ಹೈದರಾಬಾದ್​ನಿಂದ ಬರುವಾಗ ಕೋಳಿಯನ್ನೂ ಕರೆದುಕೊಂಡು ಬಂದಿದ್ದರು. ಅವರು ಗಂಗಾವತಿಗೆ ಸಾಕಿದ ಕೋಳಿಗೂ 463 ರೂಪಾಯಿ ಟಿಕೆಟ್ ದರ ನೀಡಿ ಪ್ರಯಾಣಿಸಿದ್ದಾರೆ. ಸರ್ಕಾರಿ ಬಸ್​ಗಳಲ್ಲಿ ಸಾಕು ಪ್ರಾಣಿಗಳಿಗೆ ಟಿಕೆಟ್ ಖರೀದಿಸುವ ನಿಯಮವಿದೆ. ಹೀಗಾಗಿ ನವೆಂಬರ್ 28 ರಂದು ಹೈದರಾಬಾದಿನಿಂದ ಪ್ರಯಾಣ ಮಾಡಿದ ವ್ಯಕ್ತಿ ತಂದಿದ್ದ ಕೋಳಿಗೂ ಅರ್ಧ ಟಿಕೆಟ್ ದರ ನೀಡಿ ಬಸ್ಸಿನಲ್ಲಿ ಕರೆದುಕೊಂಡು ಬಂದಿದ್ದಾರೆ.
ಒಂದು ಕೋಳಿಗೆ ಸುಮಾರು 400 ರಿಂದ 500 ರೂ. ವರೆಗೆ ಇರುತ್ತದೆ. ಆದರೂ ಈ ವ್ಯಕ್ತಿ 463 ರೂ. ನೀಡಿ ಟಿಕೆಟ್ ತೆಗೆದು ಪ್ರಯಾಣಿಸಿರುವುದು ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಬಸ್ ನಿರ್ವಾಹಕರು ಪ್ರತಿಕ್ರಿಯಿಸಿದ್ದು, ಹೈದರಾಬಾದ್‌ನಿಂದ ಬರುತ್ತಿದ್ದಾಗ ಈ ವ್ಯಕ್ತಿ ಕೋಳಿ ಹಿಡಿದುಕೊಂಡು ಬಸ್‌ ನಿಲ್ಲಿಸಿದ. ಅದಕ್ಕೆ ಅರ್ಧ ದರವಾಗುತ್ತದೆ ಎಂದು ಹೇಳಿದಾಗ ಕೋಳಿಗೂ ಅರ್ಧ ಚಾರ್ಜ್‌ ಕೊಟ್ಟು ಗಂಗಾವತಿಗೆ ಪ್ರಯಾಣ ಬೆಳೆಸಿದ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯಗೆ ಬ್ಲ್ಯಾಕ್‌ಮೇಲ್‌ ಮಾಡಲು ಸ್ಟಿಂಗ್ ಆಪರೇಷನ್.. ಇದ್ರಲ್ಲಿ ಕಾಂಗ್ರೆಸ್ಸಿನವರು ಇದ್ದಾರೆ: ಸಚಿವ ಯತೀಂದ್ರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement