ಜಿಡಿಪಿ: ಜುಲೈನಿಂದ ಸೆಪ್ಟೆಂಬರ್ ಎರಡನೇ ತ್ರೈಮಾಸಿಕದಲ್ಲಿ ಶೇ 8.4ರಷ್ಟು ಬೆಳವಣಿಗೆ

ನವದೆಹಲಿ: 2021ರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡಾ 8.4 ರಷ್ಟು ಬೆಳವಣಿಗೆ ಸಾಧಿಸಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬೆಳವಣಿಗೆ ಆಗಿದೆ ಎಂದು ಕೇಂದ್ರ ಸಾಂಖ್ಯಿಕ ಇಲಾಖೆ ಡೇಟಾ ಬಿಡುಗಡೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಭಾರತ ಶೇ. 7.4 ರಷ್ಟು ಜಿಡಿಪಿ ದಾಖಲಿಸಿತ್ತು. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಬೆಳವಣಿಗೆ ಕೊಂಚ ಕ್ಷೀಣಿಸಿತ್ತು. ಈಗ ಧನಾತ್ಮಕ ರೀತಿಯಲ್ಲಿ ಬೆಳವಣಿಗೆಯತ್ತ ಸಾಗಿದೆ ಎಂಬುದನ್ನು ಅಂಕಿ ಅಂಶಗಳು ಸೂಚಿಸುತ್ತವೆ.
ಸಿಮೆಂಟ್ ವಲಯದಲ್ಲಿ ಶೇ 14.5 ರಷ್ಟು, ಕಲ್ಲಿದ್ದಲು ಶೇ ‌14.6 ರಷ್ಟು ಏರಿಕೆ ಆಗಿದೆ. ಕಚ್ಚಾತೈಲದ ಉತ್ಪಾದನೆಯಲ್ಲಿ ಶೇಕಡಾ 2.2 ರಷ್ಟು ಬೆಳವಣಿಗೆ ಕುಸಿತವಾಗಿದ್ದರೆ, ಎಂಟು ಮೂಲಸೌಕರ್ಯ ವಲಯಗಳಲ್ಲಿ ಒಟ್ಟಾರೆ ಶೇಕಡಾ 7.5 ರಷ್ಟು ಬೆಳವಣಿಗೆ ಆಗಿದೆ. ಕಳೆದ ವರ್ಷ ನೆಗೆಟಿವ್ ಶೇ (-) 0.5 ರಷ್ಟು ಬೆಳವಣಿಗೆ ದಾಖಲಾಗಿತ್ತು. ಕಲ್ಲಿದ್ದಲು, ನೈಸರ್ಗಿಕ ಅನಿಲ, ರಿಫೈನರಿ ಸಾಮಗ್ರಿ, ರಸಗೊಬ್ಬರ, ಸ್ಟೀಲ್, ಸಿಮೆಂಟ್, ವಿದ್ಯುತ್ ಮೊದಲಾದ ಕ್ಷೇತ್ರದಲ್ಲಿ ಬೆಳವಣಿಗೆ ದಾಖಲಾಗಿದೆ.
ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 4.5ಕ್ಕೆ ಸ್ವಲ್ಪ ಏರಿಕೆಯಾಗಿದೆ. “ಮಾಸಿಕ ವರ್ಷದ ಹಣದುಬ್ಬರವು ಹಿಂದಿನ ತಿಂಗಳಿನ ಶೇ 4.41ಕ್ಕೆ ಹೋಲಿಸಿದರೆ ಶೇಕಡಾ 4.50 ರಷ್ಟಿತ್ತು. ಮತ್ತು ಒಂದು ವರ್ಷದ ಹಿಂದಿನ ಇದೇ ತಿಂಗಳಲ್ಲಿ (ಅಕ್ಟೋಬರ್ 2020) ಶೇ 5.91ರಷ್ಟಿತ್ತು,” ಎಂದು ಕಾರ್ಮಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನಿವ್ವಳ ತೆರಿಗೆ ಆದಾಯ ಏಪ್ರಿಲ್-ಅಕ್ಟೋಬರ್ ಅವಧಿಯ ಆದಾಯದ ಸ್ವೀಕೃತಿಗಳು 12.6 ಲಕ್ಷ ಕೋಟಿ ರೂ. ಅಥವಾ ಬಜೆಟ್ ಅಂದಾಜಿನ ಶೇ 70.5ರಷ್ಟಿದೆ. ಇದು ಹಿಂದಿನ ಅವಧಿಯಲ್ಲಿ ಸಂಗ್ರಹಿಸಲಾದ ಬಜೆಟ್ ಅಂದಾಜಿನ ಶೇ 34.2ಕ್ಕಿಂತ ಹೆಚ್ಚಾಗಿದೆ.
ಏಪ್ರಿಲ್-ಅಕ್ಟೋಬರ್ ಮಧ್ಯೆ ಕೇಂದ್ರದ ವಿತ್ತೀಯ ಕೊರತೆಯು ಪೂರ್ಣ ವರ್ಷದ ಗುರಿಯ ಶೇ 36.3 ಮುಟ್ಟಿದೆ. ವಿತ್ತೀಯ ಅಂತರ 5.47 ಲಕ್ಷ ಕೋಟಿ ರೂಪಾಯಿ ಆಗಿದೆ. ನಿವ್ವಳ ತೆರಿಗೆ ಸ್ವೀಕೃತಿಗಳು 10.53 ಲಕ್ಷ ಕೋಟಿ ರೂ.ಗಳಾಗಿದ್ದರೆ, ಒಟ್ಟು ವೆಚ್ಚ 18.27 ಲಕ್ಷ ಕೋಟಿ ರೂ.ಗಳು. ಸರ್ಕಾರವು ಈ ವರ್ಷದ ವಿತ್ತೀಯ ಕೊರತೆಯನ್ನು ಶೇ 6.8ಕ್ಕೆ ನಿಗದಿಪಡಿಸಿತ್ತು.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement