ಜೆಸಿಬಿಯಲ್ಲಿ ಕುಳಿತು ಆರತಕ್ಷತೆಗೆ ಬಂದ ನವ ಜೋಡಿ; ಅಯ್ಯೋ ದೇವ್ರೆ.. ಮುಂದೇನಾಯ್ತು ನೋಡಿ..!
ಕೆಲವರು ತಾವು ಏನೇ ಮಾಡಿದರೂ ಹೊಸತನ್ನು ಮಾಡಬೇಕು, ಅದನ್ನು ಜನ ಗಮನಿಸಬೇಕು ಎಂದು ಬಯುಸುತ್ತಾರೆ. ಮದುವೆಗಳಲ್ಲಿಯೂ ಈ ಟ್ರೆಂಡ್ ಶುರುವಾಗಿದೆ.
ಇಲ್ಲಿಯೂ ಮದುವೆಯೊಂದರಲ್ಲಿ ಮದುಮಕ್ಕಳು ಎಲ್ಲರನ್ನ ಗಮನ ಸೆಳೆಯಬೇಕೆಂದು ಹೊಸರೀತಿಯಲ್ಲಿ ಆರತಕ್ಷತೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು ದೊಪ್ಪನೆ ಕೆಳಕ್ಕೆ ಬಿದ್ದಿದ್ದಾರೆ..!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಹೊಸದನ್ನು ಮಾಡುವ ಮೂಲಕ ಗಮನ ಸೆಳೆಯಲು ಆರತಕ್ಷತೆಗೆ ನವ ಜೋಡಿಯೊಂದು ಜೆಸಿಬಿಯಲ್ಲಿ ಬಂದಿದೆ. ಈ ಪಾರ್ಟಿಗೆ ಆಗಮಿಸುವ ವೇಳೆ ಬಿಳಿ ಗೌನ್ ಧರಿಸಿದ ವಧು ಮತ್ತು ಕಪ್ಪು ಸೂಟ್ ಧರಿಸಿದ ವರ ಮಣ್ಣು ಅಗೆಯುವ ಜೆಸಿಬಿ ಯಂತ್ರದ ಆಸನವಾಗಿ ಅಗೆಯುವ ಬಕೆಟ್ ಮೇಲೆ ಕುಳಿತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದು. ಆದರೆ ಮುಂದೆ ಇದೇ ಅವಾಂತರಕ್ಕೆ ಕಾರಣವಾಗಿದ್ದು, ಮೇಲಿನಿಂದ ಇಬ್ಬರೂ ಕೆಳಕ್ಕೆ ದೊಪ್ಪೆಂದು ಬಿದ್ದಿದ್ದಾರೆ.
ಆರತಕ್ಷತೆಯಲ್ಲಿ ಪಾಲ್ಗೊಂಡ ಅತಿಥಿಗಳ ಕಡೆಗೆ ಕೈ ಬೀಸುತ್ತಾ ಮುನ್ನೆಡೆಯುತ್ತಿರುವಾಗ ಏಕಾಏಕಿ ಆಸನವಾಗಿ ಜೆಸಿಬಿಯ ಅಗೆಯುವ ಬಕೆಟ್ ಮೇಲೆ ದಂಪತಿ ಕುಳಿತಿದ್ದು ಅದರ ದೈತ್ಯ ಅಗೆಯುವ ಕೈ ಕೆಳಗಡೆಗೆ ವಾಲಿದೆ. ಆಗ ಮದಮಕ್ಕಳು ಅಗೆಯುವ ಬಕೆಟ್ನಿಂದ ದೊಪ್ಪೆಂದು ಕೆಳಗೆ ಬಿದ್ದಿದ್ದಾರೆ. ಮಹಾ ಪತನ ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ.
ಈ ಜೋಡಿ ಮಾತ್ರ ಜೆಸಿಬಿ ಬಾಕ್ಸ್ನಲ್ಲಿ ಮೇಲೆ ಕುಳಿತು ಕೈ ಬೀಸುತ್ತಿರುವಾಗ ಇದ್ದಕ್ಕಿದಂತೆ ಜೆಸಿಬಿ ಚಾಲಕ ದಂಪತಿ ಕುಳಿತ ಯಂತ್ರವನ್ನು ತಿರುಗಿಸಲು ಹೋಗಿದ್ದಾನೆ. ಅದು ಯಡವಟ್ಟಾಗಿ ಪಕ್ಕಕ್ಕೆ ತಿರುಗುವುದರ ಬದಲು ಜೆಸಿಬಿ ಅಗೆಯುವ ಬಕೆಟ್ ಕೆಳಕ್ಕೆ ಮುಖಮಾಡಿದ್ದರಿಂದ ಜೋಡಿ ಕೆಳಕ್ಕೆ ಬಿದ್ದಿದೆ..
ಜೆಸಿಬಿ ಚಾಲಕ ಮದುವೆಯ ಬಾಡಿಗೆ ಎಂದು ಮರೆತಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ