ಹುಬ್ಬಳ್ಳಿ ರೋಟರಿ ಶಾಲೆ ವಿದ್ಯಾರ್ಥಿಗೆ ಕೋವಿಡ್ ದೃಢ: ಸೋಮವಾರದ ವರೆಗೆ ಶಾಲೆಗೆ ರಜೆ

posted in: ರಾಜ್ಯ | 0

ಹುಬ್ಬಳ್ಳಿ: ಇಲ್ಲಿನ ಆದರ್ಶನಗರದ ರೋಟರಿ ಶಾಲೆಯ ವಿದ್ಯಾರ್ಥಿಯೋರ್ವನಿಗೆ ಕೊರೊನಾ ದೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸೋಮವಾರದ ವರೆಗೆ ಎಲ್ಲ ತರಗತಿಗಳಿಗೂ ರಜೆ ಘೋಷಿಸಲಾಗಿದೆ.
ಎರಡು ಮೂರು ದಿನಗಳಿಂದ ರೋಟರಿ ಶಾಲೆಗೆ ಗೈರಾಗಿದ್ದ 9ನೇ ತರಗತಿಯ ವಿದ್ಯಾರ್ಥಿಗೆ ಇಂದು ಕೋವಿಡ್ ದೃಢ ಪಟ್ಟಿದ್ದು ಈ ಹಿನ್ನೆಲೆಯಲ್ಲಿ ಪಾಲಕರು ಶಾಲೆಗೆ ಈ ವಿಷಯ ತಿಳಿಸಿದ ತಕ್ಷಣ ಆಡಳಿತ ಮಂಡಳಿ ಎಲ್ಲ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿತು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ವಿಷಯ ತಿಳಿಸಿದ ನಂತರ ಮುಂದಿನ ಸೋಮವಾರದ ವರೆಗೆ ಎಲ್ಲ ತರಗತಿಗಳಿಗೂ ರಜೆ ನೀಡಲಾಗಿದೆ.
ಕೋವಿಡ್ ದೃಢಪಟ್ಟ ವಿದ್ಯಾರ್ಥಿಯ ಅಕ್ಕ ಎಸ್ ಡಿಎಂ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿಯಾಗಿದ್ದು ಆಕೆಯಿಂದ ಆತನಿಗೆ ಹರಡಿದೆ ಎನ್ನಲಾಗಿದೆ. ರೋಟರಿ ಶಾಲೆ ಆಡಳಿತ ಮಂಡಳಿ ಈಗಾಗಲೇ ಆದರ್ಶನಗರ ಹೈಸ್ಕೂಲ್ ವಿಭಾಗದ ಎಲ್ಲ ತರಗತಿಗಳ ವಿದ್ಯಾರ್ಥಿಗಳ ಪಾಲಕರಿಗೆ ಮಕ್ಕಳ ಆರ್ ಟಿಪಿಸಿಆರ್ ಮಾಡಿಸುವಂತೆ ಸಹ ಮನವಿ ಮಾಡಿದೆ. ಸೋಮವಾರದ ವರೆಗೆ ರಜಾ ನೀಡಲಾಗಿದ್ದು, ಮುಂದೆ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎನ್‌ಎಲ್‌ಇ ಸಂಸ್ಥೆಯ ಗೌರವ ಕಾರ್ಯದರ್ಶಿ ರಾಜಾ ದೇಸಾಯಿ ತಿಳಿಸಿದ್ದಾರೆ.
ಸೋಂಕಿತ ವಿದ್ಯಾರ್ಥಿ ಹಾಗೂ ಪಾಲಕರ ಜತೆ ಮಾತನಾಡಿದ್ದು ಆರೋಗ್ಯವಾಗಿದೆಯಲ್ಲದೇ ಸೋಂಕಿನ ಪ್ರಮಾಣ ಬಹಳ ಅಲ್ಪವಾಗಿದೆ ಎಂದು ತಿಳಿಸಿದ್ದಾರೆ ಎಂದು ದೇಸಾಯಿ ಹೇಳಿದರು.
ಎಸ್ ಡಿಎಂನಲ್ಲಿ ಮೊದಲು ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟು,ನಂತರ ಎಲ್ಲರನ್ನು ಆರ್ ಟಿಪಿಸಿಆರ್‌ಗೊಳಪಡಿಸಿದಾಗ ಆ ಸಂಖ್ಯೆ ೩೦೦ನ್ನು ದಾಟಿತ್ತು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ವರುಣಾದಿಂದ ವಿಜಯೇಂದ್ರ ಸ್ಪರ್ಧೆ : ಊಹಾಪೋಹಕ್ಕೆ ತೆರೆ ಎಳೆದ ಯಡಿಯೂರಪ್ಪ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement