ಬಡಿಗೆ ಹಿಡಿದು1 ಕಿ.ಮೀ ಅಟ್ಟಾಡಿಸಿಕೊಂಡು ಹೋಗಿ ಚಿರತೆ ಬಾಯಿಂದ ಮಗನನ್ನು ಬಚಾವ್‌ ಮಾಡಿದ ತಾಯಿ..!

ಭೋಪಾಲ: ತಾಯಿ ತನ್ನ ಮಗುವನ್ನು ಎಷ್ಟು ಗಾಢವಾಗಿ ಪ್ರೀತಿಸುತ್ತಾಳೆ, ಅವಳ ಮಮಕಾರ ಎಂಥದ್ದು ಮತ್ತು ಅವಳು ತನ್ನ ಮಗುವನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ ಎಂಬುದಕ್ಕೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದ ಘಟನೆಯೇ ಉತ್ತಮ ನಿದರ್ಶನ ಬೇರೆ ಸಿಗಲಿಕ್ಕಿಲ್ಲ.. ಬುಡಕಟ್ಟು ಮಹಿಳೆಯೊಬ್ಬರು ಅಗಾಧ ಧೈರ್ಯ ಪ್ರದರ್ಶಿಸಿ ಚಿರತೆಯೊಂದಿಗೆ ಹೋರಾಡಿ ಚಿರತೆ ಬಾಯಿಂದ ತನ್ನ ಮಗುವನ್ನು ರಕ್ಷಿಸಿಕೊಂಡಿದ್ದಾಳೆ..!
ತನ್ನ ಮಗನನ್ನು ಚಿರತೆ ಬಂದು ಏಕಾಏಕಿ ಕೊಂಡೊಯ್ದಾಗ ಮಹಿಳೆ ಹೆದರಲಿಲ್ಲ, ಬದಲಾಗಿ ಅವಳು ತನ್ನ ಇತರ ಮಕ್ಕಳನ್ನು ತನ್ನ ಗುಡಿಸಲಿನೊಳಗೆ ಕೂಡಿಹಾಕಿ, ತನ್ನ ಎಂಟು ವರ್ಷದ ಮಗನನ್ನು ಚಿರತೆ ಹೊತ್ತೊಯ್ದ ಕಡೆ ಓಡಿದ್ದಾಳೆ. ಹಾಗೂ ಚಿರತೆಯೊಂದಿಗೆ ಹೋರಾಡಿ ತನ್ನ ಮಗನನ್ನು ರಕ್ಷಿಸಿಕೊಂಡಿದ್ದಾಳೆ.
ಚಿರತೆ ದಾಳಿಯಿಂದ ಮಗು ಗಾಯಗೊಂಡಿದೆ ಮತ್ತು ಹಾಗೂ ಮಹಿಳೆಗೂ ಗಾಯಗಳಾಗಿವೆ, ಆದರೆ ಅವಳು ತನ್ನ ಮಗನೊಂದಿಗೆ ಜೀವಂತವಾಗಿ ಮರಳುವಲ್ಲಿ ಯಶಸ್ವಿಯಾಗಿದ್ದಾಳೆ., ಅವಳ ಸಾಹಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರಾಜ್ಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶ್ಲಾಘಿಸಿದ್ದಾರೆ.
ಘಟನೆ ನಡೆದದ್ದು ಹೇಗೆ..?
ರಾಜ್ಯದ ರಾಜಧಾನಿ ಭೋಪಾಲ್‌ನಿಂದ 500 ಕಿಮೀಗೂ ಹೆಚ್ಚು ದೂರದಲ್ಲಿರುವ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸಂಜಯ್ ಟೈಗರ್ ರಿಸರ್ವ್‌ನ ಬಫರ್ ವಲಯದಲ್ಲಿರುವ ಬಾಡಿ ಝರಿಯಾ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಕಿರಣ್ ಎಂಬ ಬೈಗಾ ಬುಡಕಟ್ಟು ಮಹಿಳೆ ತನ್ನ ಮೂರು ಮಕ್ಕಳೊಂದಿಗೆ ತಮ್ಮ ಗುಡಿಸಲಿನ ಬೆಂಕಿ ಕಾಯಿಸುತ್ತ ಕುಳಿತಿದ್ದಳು. ಇದ್ದಕ್ಕಿದ್ದಂತೆ, ಚಿರತೆಯೊಂದು ಕಾಣಿಸಿಕೊಂಡಿತು ಮತ್ತು ಆಕೆಯ ಮಗ ರಾಹುಲನನ್ನು ಕಚ್ಚಿಕೊಂಡು ಓಡಿಹೋಯಿತು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಈ ಹಠಾತ್‌ ಘಟನೆಯಿಂದ ಮಹಿಳೆ ಆಘಾತಕ್ಕೊಳಗಾದರು, ಆದರೆ ಹೆದರಲಿಲ್ಲ. ಆಕೆ ತನ್ನ ಇತರ ಇಬ್ಬರು ಮಕ್ಕಳನ್ನು ಗುಡಿಸಲಿನೊಳಗೆ ಕೂಡಿಹಾಕಿದಳು ಮತ್ತು ತಕ್ಷಣವೇ ಕಾಡಿನ ಕಡೆಗೆ ಓಡಿಹೋದಳು, ಅಲ್ಲಿ ಚಿರತೆ ತನ್ನ ಮಗನನ್ನು ಕಚ್ಚಿಕೊಂಡು ಹೋಗುವುದನ್ನು ಕಂಡಳು. ಹಾಗೂ ಈ ತಾಯಿ ಚಿರತೆಯನ್ನು ಸುಮಾರು ಒಂದು ಕಿಲೋಮೀಟರ್ ಅಟ್ಟಿಸಿಕೊಂಡು ಹೋದಳು, ಆದರೆ ಚಿರತೆ ಪೊದೆಗಳಲ್ಲಿ ಅಡಗಿಕೊಂಡಿತು.
ಕಿರಣ್ ಕೂಡ ಸುಮ್ಮನಿರಲಿಲ್ಲ. ಅವಳು ಬಡಿಗೆ ಹಿಡಿದು ಚಿರತೆಯನ್ನು ಓಡಿಸಲು ಪ್ರಯತ್ನಿಸುತ್ತಲೇ ಇದ್ದಳು ಮತ್ತು ಮಗುವಿಗೆ ಅಪಾಯವಾಗದಂತೆ ಎಚ್ಚರಿಕೆಯನ್ನೂ ವಹಿಸಿದಳು. ಕೊನೆಗೂ ಬಡಿಗೆ ಹಿಡಿದ ಮಹಿಳೆ ಆವೇಶಕ್ಕೆ ಹೆದರಿದ ಚಿರತೆ ಹೆದರಿ ಮಗುವನ್ನು ಬಿಟ್ಟು ಓಡಿತು. ಕಿರಣ್ ತಕ್ಷಣ ತನ್ನ ಮಗನನ್ನು ಕರೆದುಕೊಂಡು ಬರುತ್ತಿರುವಾಗ ಚಿರತೆ ಮತ್ತೆ ಅವಳ ಮೇಲೆ ದಾಳಿ ಮಾಡಿದೆ. ಆದರೆ, ಅವಳು ಶೌರ್ಯದಿಂದ ಚಿರತೆಯನ್ನು ಸೋಲಿಸಿದಳು ಎಂದು ಅಧಿಕಾರಿ ಹೇಳಿದ್ದಾರೆ.
ಈ ಮಧ್ಯೆ, ವಿಷಯ ಗೊತ್ತಾಗಿ ಮಹಿಳೆಯ ನೆರವಿಗೆ ಇತರ ಗ್ರಾಮಸ್ಥರು ಕೂಡ ಸ್ಥಳಕ್ಕೆ ಆಗಮಿಸಿದರು. ಮತ್ತು ನಂತರ ಚಿರತೆ ಕಾಡಿನಲ್ಲಿ ಕಣ್ಮರೆಯಾಯಿತು. ಚಿರತೆ ದಾಳಿಯಿಂದ ಬಾಲಕನ ಬೆನ್ನು, ಕೆನ್ನೆ ಮತ್ತು ಕಣ್ಣುಗಳಿಗೆ ಗಾಯಗಳಾಗಿದ್ದು, ತಾಯಿಯೂ ಗಾಯಗೊಂಡಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಫರ್ ಝೋನ್ ರೇಂಜರ್ ಅಸೀಮ್ ಭುರಿಯಾ  ಅವರು ತಾಯಿ ಹಾಗೂ ಮಗನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅವರ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಅರಣ್ಯ ಇಲಾಖೆ ಭರಿಸಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮಂಗಳವಾರ ಟ್ವೀಟ್ ಮಾಡಿರುವ ಸಿಎಂ ಚೌಹಾಣ್ ಮಹಿಳೆಯ ಧೈರ್ಯದ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement