ಸರ್ಫ್‌ಸೈಡ್ (ಅಮೆರಿಕ): ಯುವಕನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು 1,600 ಕಿಮೀಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿಯೂ ಬದುಕಿ ಉಳಿದಿದ್ದಾನೆ..! ಅಮೆರಿಕದ ಮಿಯಾಮಿಯಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಗ್ವಾಟೆಮಾಲಾದಿಂದ ಮಿಯಾಮಿಗೆ ಚಲಿಸುತ್ತಿದ್ದ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ 26 ವರ್ಷದ ಯುವಕ ಅಡಗಿಕೊಂಡು 1,600 ಕಿ.ಮೀ ದೂರ ಪ್ರಯಾಣಿಸಿದ್ದಾನೆ.ಆತ ಜೀವಂತವಾಗಿ ಹೊರಬಂದಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ವಾಟೆಮಾಲಾದಿಂದ ತೆರಳಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವು ಮಿಯಾಮಿ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಇಳಿದಿದೆ. ಪ್ರಯಾಣಿಕರು ವಿಮಾನದಿಂದ ಇಳಿಯಲು ಸಿದ್ಧರಾಗಿದ್ದರು. ಆ ಸಂದರ್ಭದಲ್ಲಿ ಯುವಕನೊಬ್ಬ ಲ್ಯಾಂಡಿಂಗ್ ಗೇರ್‌ನ ಕೆಳಭಾಗದಿಂದ ಹೊರ ಬರುವುದನ್ನು ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಲ್ಯಾಂಡಿಂಗ್ ಗೇರ್‌ನಿಂದ ಹೊರಬಂದ ವ್ಯಕ್ತಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಅಲ್ಲಿನ ಭದ್ರತಾ ಸಿಬ್ದಂದಿ ಆತನನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ.
ಅಮೆರಿಕನ್ ಏರ್‌ಲೈನ್ಸ್ ನೀಡಿದ ಹೇಳಿಕೆಯ ಪ್ರಕಾರ, ಗ್ವಾಟೆಮಾಲಾ ನಗರದಿಂದ ಮಿಯಾಮಿಗೆ ಆಗಮಿಸುವ ಫ್ಲೈಟ್ 1182 ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ 10 ಗಂಟೆ ನಂತರ ತಲುಪಿತು ಮತ್ತು ಭದ್ರತಾ ಕಾಳಜಿಗಾಗಿ ಕಾನೂನು ಜಾರಿ ಅಧಿಕಾರಿಗಳು ವಿಮಾನವನ್ನು ಭೇಟಿ ಮಾಡಿದರು. ಇವುಗಳ ಹೊರತಾಗಿ ಅಮೆರಿಕದ ವಿಮಾನಯಾನ ಸಂಸ್ಥೆಯು ಬೇರೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
ವಿಡಿಯೊ ವಿಮಾನವು ಇಳಿದ ಕೂಡಲೇ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ತೋರಿಸುತ್ತದೆ. ಸಿಕ್ಕಿಬಿದ್ದ ನಂತರ ವ್ಯಕ್ತಿಯನ್ನು ಅಮೆರಿಕ ಇಮಿಗ್ರೇಷನ್ ವಿಭಾಗದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಮತ್ತು ನಂತರ ಹೆಚ್ಚಿನ ವೈದ್ಯಕೀಯ ವೀಕ್ಷಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಂದು ಅಧಿಕಾರಿಗಳು ಸೇರಿಸಿದರು
ನಿಮ್ಮ ಕಾಮೆಂಟ್ ಬರೆಯಿರಿ