ಮೆಹಬೂಬ್‌ ಮಠದ ಅವರ ಕವನ ಸಂಕಲನ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ

ಬೆಳಗಾವಿ : ಇಲ್ಲಿನ ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೊಪ್ಪಳದ ಯುವ ಕವಿ ಮೆಹಬೂಬ್‌ ಮಠದ ಅವರ ಚೊಚ್ಚಲ‌ ಕವನ ಸಂಕಲನ ಬಿಸಿಲು ಕಾಡುವ ಪರಿ ಆಯ್ಕೆಯಾಗಿದೆ.
ಮಾನವೀಯ ಕಾಳಜಿಯ ಆತ್ಯಂತಿಕ ನೆಲೆಯು ಅವರ ಕಾವ್ಯದ ಜೀವಾಳವಾಗಿದ್ದು ಹೊಸ ತಲೆಮಾರಿನ ಭರವಸೆಯ ಕವಿ ಎಂದು ವಿಮರ್ಶಕರು ಗುರುತಿಸಿದ್ದಾರೆ.
ಡಿ.12 ರಂದು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮೆಹಬೂಬ್‌ ಮಠದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 / 5. 0

ಪ್ರಮುಖ ಸುದ್ದಿ :-   ಉಡುಪಿ ಶ್ರೀಕೃಷ್ಣ ಮಠಕ್ಕೆ ನಿರ್ಮಲಾ ಸೀತಾರಾಮನ್‌ ಭೇಟಿ

ನಿಮ್ಮ ಕಾಮೆಂಟ್ ಬರೆಯಿರಿ

advertisement