ಕರ್ನಾಟಕದಲ್ಲಿ ಒಟ್ಟು 7.5 ಕೋಟಿ ಕೋವಿಡ್‌ ಲಸಿಕೆ ನೀಡಿಕೆ: ಸಚಿವ ಸುಧಾಕರ

ಬೆಂಗಳೂರು: ರಾಜ್ಯದಲ್ಲಿ ಒಟ್ಟಾರೆ ೭.೫೦ ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ನಿನ್ನೆ ಒಂದೇ ದಿನ ೯ ಲಕ್ಷ ಡೋಸ್ ಲಸಿಕೆ ನೀಡಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. ೯೨ ಜನರು ಮೊದಲ ಡೋಸ್ ಪಡೆದಿದ್ದರೆ, ಶೇ. ೬೨ ರಷ್ಟು ಜನರಿಗೆ ಸೆಕೆಂಡ್ ಡೋಸ್ ನೀಡಲಾಗಿದೆ. ದೇಶದಲ್ಲೇ ನಮ್ಮ ರಾಜ್ಯ ಲಸಿಕೆ ನೀಡುವುದರಲ್ಲಿ ೨ ಅಥವಾ ೩ನೇ ಸ್ಥಾನದಲ್ಲಿದೆ ಎಂದರು.
ಒಂದು ಡೋಸ್ ಲಸಿಕೆ ಪಡೆದರೆ, ಸ್ಪಲ್ಪ ರೋಗನಿರೋಧಕ ಶಕ್ತಿ ಬರುತ್ತದೆ. ಸಂಪೂರ್ಣ ರೋಗ ನಿರೋಧಕ ಶಕ್ತಿ ಬರಬೇಕಾದರೆ, ೨ ಡೋಸ್ ಪಡೆಯಲೇಬೇಕು. ಹೀಗಾಗಿ ಜನ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದು ಸೂಚಿಸಿದರು.
ಕೊರೊನಾ ರೂಪಾಂತರಿ ಓಮಿಕ್ರಾನ್ ಆತಂಕದಿಂದಾಗಿ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿದ್ದೇವೆ. ಎಲ್ಲರಿಗೂ ಕಡ್ಡಾಯ ಟೆಸ್ಟ್ ಮಾಡಲಾಗುತ್ತದೆ. ಜೊತೆಗೆ ಟೆಸ್ಟ್ ವರದಿ ೩-೪ ಗಂಟೆ ಒಳಗೆ ಕೈಸೇರುವ ವ್ಯವಸ್ಥೆ ಮಾಡಲಾಗಿದೆ. ತಕ್ಷಣವೇ ರಿಪೋರ್ಟ್ ಬರಲು ಅಬೋರ್ಟ್ ಟೆಸ್ಟ್ ಮಾಡಲಾಗುತ್ತಿದೆ. ಈ ಅಬೋರ್ಟ್ ಟೆಸ್ಟ್‌ಗೆ ಕೇಂದ್ರವೇ ದರ ನಿಗದಿಗೊಳಿಸಿದೆ. ಈ ಟೆಸ್ಟ್‌ಗೆ ೩ ಸಾವಿರ ರೂ. ನೀಡಬೇಕು. ಅಬೋರ್ಟ್ ಟೆಸ್ಟ್ ೧ರಿಂದ ೨ ಗಂಟೆಯಲ್ಲಿ ಬರುತ್ತದೆ. ಈ ಟೆಸ್ಟ್ ನಿಖರವಾದ ವರದಿ ನೀಡುತ್ತದೆ. ಜೊತೆಗೆ ಆರ್‌ಟಿ -ಪಿಸಿಆರ್ ಟೆಸ್ಟ್ ಕೂಡಾ ೩ರಿಂದ ೪ ಗಂಟೆ ಒಳಗೆ ರಿಪೋರ್ಟ್ ನೀಡಲು ಕ್ರಮ ಕೈಗೊಳ್ಳಾಗಿದೆ ಎಂದರು.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement