ನೇಪಾಳದಲ್ಲಿ ನಡೆದ ಒಂದು ಅಸಾಮಾನ್ಯ ವಿದ್ಯಮಾನದಲ್ಲಿ ವಿಮಾನ ಪ್ರಯಾಣಿಕರು ಮತ್ತು ಭದ್ರತಾ ಅಧಿಕಾರಿಗಳು ಸೇರಿ ರನ್ ವೇಯಿಂದ ವಿಮಾನವನ್ನೇ ತಳ್ಳಿದ್ದಾರೆ..!
ನೇಪಾಳದ ಸುದ್ದಿಗಳ ಪ್ರಕಾರ, ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ತಾರಾ ಏರ್ ವಿಮಾನವು ಟೈರ್ ಸ್ಫೋಟಗೊಂಡ ನಂತರ ಏರ್‌ಸ್ಟ್ರಿಪ್‌ನಲ್ಲಿ ಸಿಲುಕಿಕೊಂಡಿತ್ತು. ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯಲು ಮುಂದಾದಾಗ ಅದರ ಹಿಂದಿನ ಟೈರ್ ಒಡೆದಿದೆ. ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪೈಲಟ್‌ಗೆ ತುರ್ತು ತಂತ್ರಗಳನ್ನು ಮಾಡಲು ಸಾಧ್ಯವಾದರೂ, ಅದನ್ನು ರನ್ ವೇಯಿಂದ ಸರಿಸಲು ಸಾಧ್ಯವಾಗಲಿಲ್ಲ.
ಸಿಕ್ಕಿಬಿದ್ದ ವಿಮಾನದಿಂದ ಟ್ಯಾಕ್ಸಿ ದಾರಿ ನಿರ್ಬಂಧವಾಗಿದ್ದರಿಂದ ಹಾಗೂ ಮತ್ತೊಂದು ವಿಮಾನವು ಇಳಿಯಲು ಸಾಧ್ಯವಾಗದೇ ಇರುವುದು ಈ ಘಟನೆಗೆ ಮುನ್ನುಡಿ ಬರೆಯಿತು. ಹಾಗೂ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಮಧ್ಯ ಪ್ರವೇಶಿಸಿದರು.
ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೊ ತುಣುಕು ಕನಿಷ್ಠ 20 ಜನರು ರನ್ ವೇಯಿಂದ ವಿಮಾನವನ್ನು ತಳ್ಳುತ್ತಿರುವುದನ್ನು ತೋರಿಸಿದೆ. “ಬಹುಶಃ ನಮ್ಮ ನೇಪಾಳದಲ್ಲಿ ಮಾತ್ರ ಎಂದು ಶೀರ್ಷಿಕೆ ನೀಡಲಾಗಿದೆ:(ನೇಪಾಳಿಯಿಂದ ಅನುವಾದಿಸಲಾಗಿದೆ)”. 25 ಸೆಕೆಂಡುಗಳ ವಿಡಿಯೊ ಕ್ಲಿಪ್ ಇದಾಗಿದ್ದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿಯೂ ಶೇರ್ ಮಾಡಲಾಗಿದೆ.
ತಾರಾ ಏರ್‌ನ ಮಾತೃಸಂಸ್ಥೆಯಾದ ಯೇತಿ ಏರ್‌ಲೈನ್ಸ್, ತಾರಾ ಏರ್ 9ಎನ್-ಎವಿಇ ಟೈರ್ ಸ್ಫೋಟಗೊಂಡ ಕಾರಣ ಮಾರ್ಗದಲ್ಲಿಯೇ ನಿಂತಿತು. ಹಾಗೂ ರನ್ ವೇಯಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದ ಕಾರಣ ವಿಮಾನ ಪ್ರಯಾಣಿಕರೇ ಮಧ್ಯಪ್ರವೇಶಿಸಿ ಸಹಾಯ ಮಾಡಿದರು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ