ರಾಷ್ಟ್ರಗೀತೆ ಅರ್ಧಕ್ಕೇ ನಿಲ್ಲಿಸಿ ಕುಳಿತ ಮಮತಾ ಬ್ಯಾನರ್ಜಿ: ವಿಡಿಯೊ ಶೇರ್‌ ಮಾಡಿ ರಾಷ್ಟ್ರಗೀತೆಗೆ ಅವಮಾನ ಎಂದ ಬಿಜೆಪಿ, ದೂರು ದಾಖಲು

ಮುಂಬೈ: ಮುಂಬೈ ಘಟಕದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೊಬ್ಬರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ “ರಾಷ್ಟ್ರಗೀತೆಗೆ ಸಂಪೂರ್ಣ ಅಗೌರವ ತೋರಿಸಿದ್ದಾರೆ” ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಬುಧವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿಯವರು ಅದನ್ನು ಕುಳಿತಿರುವಾಗಲೇ ಹಾಡಿದರು ಮತ್ತು ನಂತರ “ಥಟ್ಟನೆ ಅರ್ಧಕ್ಕೇ ನಿಲ್ಲಿಸಿದರು” ಎಂದು ದೂರು ದಾಖಲಿಸಿದ್ದಾರೆ. .
ಮುಂಬೈನ ಬಿಜೆಪಿ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಅವರು ಬುಧವಾರ ಮುಂಬೈ ಪೊಲೀಸ್ ಆಯುಕ್ತರಿಗೆ ಇಮೇಲ್ ಮೂಲಕ ಪೊಲೀಸ್ ದೂರು ಸಲ್ಲಿಸಿದ್ದು, ವಿಡಿಯೋ ಸಂದೇಶದಲ್ಲಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಯನ್ನು ಅವಮಾನಿಸಿದ್ದಾರೆ, ಅವರು ಕುಳಿತಿರುವಾಗ ರಾಷ್ಟ್ರಗೀತೆಯನ್ನು ಪ್ರಾರಂಭಿಸಿದರು, ಮಧ್ಯದಲ್ಲಿ ಎದ್ದುನಿಂತು ಮತ್ತೆ ಹಾಡಲು ಶುರು ಮಾಡಿದರು ಹಾಗೂ ಅರ್ಧಕ್ಕೇ ನಿಲ್ಲಿಸಿ ಮತ್ತೆ ಕುಳಿತಿಕೊಂಡು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ಭಾರತದ ರಾಷ್ಟ್ರಗೀತೆಯನ್ನು ಪಶ್ಚಿಮ ಬಂಗಾಳಕ್ಕೆ ಸೇರಿದ ರವೀಂದ್ರನಾಥ ಟ್ಯಾಗೋರ್ ಬರೆದಿದ್ದಾರೆ. ಮಮತಾ ಬ್ಯಾನರ್ಜಿ ಇದೇ ಭೂಮಿಯಿಂದ ಬಂದವರು. ಆಕೆ ರಾಜ್ಯದ ಜನತೆಗೆ ಮಾತ್ರವಲ್ಲ ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ, ಮಮತಾ ಬ್ಯಾನರ್ಜಿ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸುವಂತೆ ಮುಂಬೈ ಪೊಲೀಸ್ ಕಮಿಷನರ್ ಅವರನ್ನು ಒತ್ತಾಯಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಗುಪ್ತಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಮಮತಾ ಬ್ಯಾನರ್ಜಿ ಅವರು ಮುಂಬೈಗೆ ಕಾರ್ಯಕ್ರಮವೊಂದರಲ್ಲಿ ಭೇಟಿ ನೀಡಿದಾಗ, ಕುಳಿತಿರುವ ಸ್ಥಾನದಲ್ಲಿ ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿದರು ಮತ್ತು ನಂತರ ಎದ್ದುನಿಂತು, ಮತ್ತು ನಾಲ್ಕೈದು ಸಾಲಿನ ನಂತರ ಥಟ್ಟನೆ ರಾಷ್ಟ್ರಗೀತೆಯನ್ನು ನಿಲ್ಲಿಸಿದರು ಎಂದು ಬರೆದಿದ್ದಾರೆ.
1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಮಮತಾ ಅಪರಾಧ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಅವರ ಕೃತ್ಯವು 2015ರ ಗೃಹ ಸಚಿವಾಲಯದ ಆದೇಶಕ್ಕೂ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಅವರು ರಾಷ್ಟ್ರಗೀತೆ ಅರ್ಧಕ್ಕೆಏ ಹಾಡಿ ಕುಳಿತುಕೊಂಡಿರುವ ವಿಡಿಯೊ ಶೇರ್ ಮಾಡಿದ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವೀಯಾ ಇದನ್ನು ಖಂಡಿಸಿದ್ದಾರೆ.

ರಾಷ್ಟ್ರಗೀತೆ ಎಂಬುದು ನಮ್ಮ ದೇಶದ ಅತ್ಯಂತ ಶಕ್ತಿಶಾಲಿ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಸಾರ್ವಜನಿಕ ಹುದ್ದೆಯನ್ನು ಹೊಂದಿರುವ ಜನರು ಅದನ್ನು ಕೀಳಾಗಿ ನೋಡಬಾರದು. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆ ಹಾಡಿದ್ದನ್ನು ಕೇಳಿ ಎಂದಿದ್ದಾರೆ. ಹಾಗೇ, ತೇಜಸ್ವಿ ಸೂರ್ಯ ಟ್ವೀಟ್​ ಮಾಡಿ, ಇಲ್ಲಿ ನೋಡಿ, ನಮ್ಮ ದೇಶದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡುವಂಥ ಮುಖ್ಯಮಂತ್ರಿಗಳೂ ಇದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಹೀಗೆ ನಡೆದುಕೊಳ್ಳುವುದು ತೀವ್ರ ಖಂಡನೀಯ, ನಾಚಿಕೆಗೇಡು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement