ಪಬ್​​ನಲ್ಲಿ ನಟ, ನಿರೂಪಕ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ

ಬೆಂಗಳೂರು: ಬೆಂಗಳೂರಿನ ಸದಾಶಿವನಗರದ ಪಬ್ ನಲ್ಲಿ ತಡರಾತ್ರಿ ಬಿಗ್​ಬಾಸ್ ಸ್ಪರ್ಧಿ ಕಿರಿಕ್​ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ತಡರಾತ್ರಿ ಬೆಂಗಳೂರಿನ ಸದಾಶಿವನಗರದ ಪಬ್​ನಲ್ಲಿ ಫೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಕೀರ್ತಿ ಮೇಲೆ ವ್ಯಕ್ತಿಯೊಬ್ಬ ಬಿಯರ್​ ಬಾಟಲ್​ನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಸದಾಶಿವನಗರ ಪಬ್​ ಗೆ ಕಿರಿಕ್ ಕೀರ್ತಿ ತಮ್ಮ ಸ್ನೇಹಿತರೊಂದಿಗೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ಕಿರಿಕ್​ ಕೀರ್ತಿ ಅವರ ಫೋಟೋ ತೆಗೆದಿದ್ದಾರೆ. ನನ್ನ ಪರ್ಮಿಷನ್​ ಇಲ್ಲದೇ ಯಾಕೆ ಫೋಟೋ ತೆಗೆದುಕೊಂಡಿದ್ದೀರ ಎಂದು ಕೀರ್ತಿ ಕೇಳಿದ್ದಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಪಿತಗೊಂಡ ಆ ವ್ಯಕ್ತಿ ಬಿಯರ್​ ಬಾಟಲ್​ ನಿಂದ ಕಿರಿಕ್​ ಕೀರ್ತಿ ತಲೆಗೆ ಹೊಡೆದಿದ್ದಾನೆ. ಗುರುವಾರ ತಡರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಗಾಯಗೊಂಡ ಕಿರಿಕ್​ ಕೀರ್ತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಲ್ಲೆ ಮಾಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕಿರುತೆರೆ ನಿರೂಪಕನಾಗಿ ಕಿರಿಕ್​ ಕೀರ್ತಿ ಗುರುತಿಸಿಕೊಂಡಿದ್ದ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.

ಪ್ರಮುಖ ಸುದ್ದಿ :-   ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ನಂತರ ಮುಂಬೈನಲ್ಲಿ ಪತ್ತೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement