ಬಲು ಅಪರೂಪ ನಮ್‌ ಜೋಡಿ..: 35 ವರ್ಷ ಕಾದು 65ರ ವಯಸ್ಸಿನಲ್ಲಿ ತಾನು ಪ್ರೀತಿಸಿದವಳನ್ನೇ ಮದುವೆಯಾದ ವ್ಯಕ್ತಿ..!

ಮಂಡ್ಯ: ಇಲ್ಲೊಂದು ಅಪರೂಪದ ಮದುವೆ ನಡೆದಿದೆ. ವ್ಯಕ್ತಿಯೊಬ್ಬ ತಾನು ಪ್ರೀತಿಸಿದವಳಿಗಾಗಿ ಕಾಯ್ದು ಕಾಯ್ದು 35 ವರ್ಷದ ಬಳಿಕೆ ಅವಳನ್ನೇ ವರಿಸಿದ್ದಾನೆ..!
ಆಕೆ ಬೇರೆ ಯಾರೂ ಅಲ್ಲ, ಈ ಪ್ರೇಮಿಯ ಸೋದರತ್ತೆಯ ಮಗಳೇ.ಅವಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಈ ವ್ಯಕ್ತಿ ಅವಳಿಗಾಗಿ ಬರೋಬ್ಬರಿ 35 ವರ್ಷ ಕಾದಿದ್ದಾರೆ..35 ವರ್ಷದ ನಂತರ ಇವರಿಬ್ಬರಿಗೆ ಮದುವೆಯಾಗುವ ಯೋಗ ಕೂಡಿಬಂದಿದೆ.
ಈ ವ್ಯಕ್ತಿಯ ಅದೃಷ್ಟದಲ್ಲಿ ತನ್ನ ಸೋದರತ್ತೆ ಮಗಳೊಂದಿಗೆ ಮದುವೆ ವಯಸ್ಸಿನಲ್ಲಿ ಮದುವೆಯಾಗುವ ಯೋಗ ಕೂಡಿಬಂದಿರಲಿಲ್ಲ. ಹೀಗಂದೆ ಆತ ಪ್ರೀತಿಯನ್ನು ಬಿಡಲಿಲ್ಲ. ತಾನು ಮದುವೆಯಾದೆ ಅವಳಿಗಾಗಿ 35 ವರ್ಷ ಕಾದಿದ್ದಾರೆ ಈ ವ್ಯಕ್ತಿ..! ಕೊನೆಗೂ ಗೆದ್ದಿದ್ದು ಪ್ರೀತಿ. ಫಲವಾಗಿ 35 ವರ್ಷದ ಬಳಿಕ ವ್ಯಕ್ತಿ ತಮ್ಮ 65ನೇ ವಯಸ್ಸಿನಲ್ಲಿ ಪ್ರೀತಿಸಿದಾಕೆಯೊಂದಿಗೆ ಸಪ್ತಪದಿ ತುಳಿದು ಹೊಸಬದುಕಿಗೆ ಕಾಲಿಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಮೇಳುಕೋಟೆಯಲ್ಲಿ ಮದುವೆಯಾಗಿದ್ದಾರೆ.
65ನೇ ವಯಸ್ಸಿನಲ್ಲಿ ಹೊಸ ಬದುಕಿಗೆ ಕಾಲಿಟ್ಟ ಮೈಸೂರಿನ ಮೇಟಗಹಳ್ಳಿ ಹೆಬ್ಬಾಳದ ಚಿಕ್ಕಣ್ಣ ಮತ್ತು ಜಯಮ್ಮ. ಜಯಮ್ಮ ಚಿಕ್ಕಣ್ಣನ ಸೋದರತ್ತೆ ಮಗಳು. ಚಿಕ್ಕಂದಿನಲ್ಲೇ ಚಿಕ್ಕಣ್ಣ ಜಯಮ್ಮನನ್ನು ಪ್ರೀತಿಸುತ್ತಿದ್ದರಂತೆ. ಆದರೆ ಮನೆಯವರು ಜಯಮ್ಮನನ್ನು ಬೇರೆಯ ಯುವಕನಿಗೆ ಮದುವೆ ಮಾಡಿ ಕೊಟ್ಟಿದ್ದರಂತೆ. ಆದರೆ 35 ವರ್ಷದ ಹಿಂದೆ ಜಯಮ್ಮ ಬೇರೆಯವರನ್ನು ಮದುವೆಯಾಗಿ ಹೋದರೂ ಚಿಕ್ಕಣ್ಣ ಮಾತ್ರ. ಮದುವೆಯಾಗದೇ ಸೋದರತ್ತೆ ಮಗಳ ನೆನಪಿನಲ್ಲೇ ಇಷ್ಟು ವರ್ಷ ಒಂಟಿಯಾಗಿದ್ದರಂತೆ.
ಮದುವೆಯಾದ ಜಯಮ್ಮನಿಗೆ ಒಂದು ಮಗನನ್ನು ಹೆತ್ತಿದ್ದರೂ ಗಂಡ ಹೆಂಡತಿ ನಡುವೆ ಸಾಮರಸ್ಯ ಇರಲಿಲ್ಲ.‌ ಹೀಗಾಗಿ ಜಯಮ್ಮ ಇತ್ತೀಚಿಗೆ ಗಂಡನನ್ನು ತೊರೆದು ತವರಿಗೆ ವಾಪಸ್ಸಾಗಿದ್ದರು. ಜಯಮ್ಮ ತವರಿಗೆ ವಾಪಸ್ಸಾಗುತ್ತಿದ್ದಂತೆ ಮತ್ತೆ ತನ್ನ ಪ್ರೀತಿಗಾಗಿ ತುಡಿದ ಚಿಕ್ಕಣ್ಣ ಜಯಮ್ಮನ ಮನವೊಲಿಸಿ ಹಿರಿಯರ‌ ಮನವೊಲಿಸಿ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.
ಮಂಡ್ಯದ ಮೇಲುಕೋಟೆ ಚೆಲುವರಾಯಸ್ವಾಮಿ ದೇವಾಲಯದಲ್ಲಿ ನಡೆದ ಈ ಅಪರೂಪದ ಮದುವೆಗೆ ಜಯಮ್ಮನ 25 ವರ್ಷದ ಪುತ್ರ ಸೇರಿದಂತೆ ಕುಟುಂಬಸ್ಥರು ಸಾಕ್ಷಿಯಾಗಿದ್ದಾರೆ. ಈ ಜೋಡಿಯ ಮದುವೆ ಪೋಟೋ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಚಿಕ್ಕಣ್ಣನಿಗೆ ಈ ಇಳಿ ವಯಸ್ಸಿನಲ್ಲಾದರೂ ತಾನು ಪ್ರೀತಿಸಿದ ಜಯಮ್ಮನನ್ನು ಮದುವೆಯಾಗಿದ್ದಕ್ಕೆ ಖುಷಿಯಿದೆಯಂತೆ. ಹೀಗಾಗಿ ಚಿಕ್ಕಣ್ಣನ ಈ ಪ್ರೀತಿಯನ್ನು ನೋಡಿ ಕುಟುಂಬಸ್ಥರು ಕೂಡ ಮದುವೆಗೆ ಒಪ್ಪಿಕೊಂಡಿದ್ದು ಸಾಂಪ್ರದಾಯಿಕವಾಗಿ ಜಯಮ್ಮ ಹಾಗೂ ಚಿಕ್ಕಣ್ಣ ಮದುವೆ ನೆರವೇರಿಸಿಕೊಟ್ಟಿದ್ದಾರೆ.

ಪ್ರಮುಖ ಸುದ್ದಿ :-   ನನ್ನ ಬ್ಲ್ಯಾಕ್‌ಮೇಲ್ ಮಾಡಲು ಯತ್ನ ; ಇಬ್ಬರ ಪಾತ್ರದ ಬಗ್ಗೆ ತನಿಖೆ : ಸ್ಟಿಂಗ್‌ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement